ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರಿನಿಂದ ಗಾರ್ಮೆಂಟ್ಸ್ ನೌಕರರನ್ನು ಕರೆತರುತ್ತಿದ್ದ ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ ಒಬ್ಬ ಮೃತ ಪಟ್ಟು ಕೆಲವರು ಗಾಯಗೊಂಡಿರುವ ಘಟನೆ ತುಮಕೂರು ತಾಲೂಕಿನ ಉರ್ಡಿಗೆರೆಯ ಪೆಮ್ಮನಹಳ್ಳಿ ಸಮೀಪ ನಡೆದಿದೆ.
ಮಂಗಳವಾರ ಸಂಜೆ ಗೋಲ್ಡನ್ ಸಿಮ್ಸ್ ಫ್ಯಾಕ್ಟರಿಗೆ ಸೇರಿದ ಖಾಸಗಿ ಬಸ್ ಚಾಲಕನ ನಿಯಂತ್ರಣಕ್ಕೆ ಸಿಗದೆ ಉರುಳಿದೆ,ಇದರಿಂದ ಗಾರ್ಮೆಂಟ್ಸ್ ನೌಕರ ಕೆಂಪರಾಜು ಎಂಬುವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಬಸ್ ನಲ್ಲಿ 35ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಚಾಲಕನ ಅತಿವೇಗವೆ ಅಪಘಾತಕ್ಕೆ ಕಾರಣವಾಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಊರ್ಡಿಗೆರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.