ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆರಕ್ಷಕರ ಫೋಟೋ ಹಾಕಿ ನಕಲಿ ಐಡಿ ಕ್ರಿಯೆಟ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಸಂಗಗಳು ರಾಜ್ಯದಾದ್ಯಂತ ನಡೆಯುತ್ತಿದ್ದು ಇದೀಗ ಗಡಿ ಜಿಲ್ಲೆಗೂ ಹ್ಯಾಕರ್ಸ್‍ಗಳ ಈ ಕೃತ್ಯ ಪಸರಿಸುತ್ತಿದೆ.
ಚಾಮರಾಜನಗರದ ಕೆಲವು ಸಿಬ್ಬಂದಿಗಳ ಫೋಟೋ ಕದಿಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅಷ್ಟೆ ಅಲ್ಲ ಆ ಸಿಬ್ಬಂದಿಯ ಫೋಟೋ ಹಾಕಿ ಮತ್ತೊಬ್ಬ ಸಿಬ್ಬಂದಿಗೆ ಹಣ ನೀಡುವಂತೆ ಸಂದೇಶ ರವಾನಿಸಿದ್ದಾರೆ.
ಆದರೆ ಮೋಸದ ಬಲೆಗೆ ಬೀಳುವ ಮೊದಲೆ ಆರಕ್ಷಕ ಸಿಬ್ಬಂದಿ ನಿಮ್ಮ ಫೋನ್ ನಂಬರ್, ವಾಟ್ಸಾಪ್ ನಂಬರ್ ಕಳಿಸಿ ಸರ್ ಅಂದಾಗ ಆ ಕಡೆಯಿಂದ ಹಿಂದಿ ಭಾಷೆಯಿಂದ ಸಂದೇಶಗಳು ಬರಲಾರಂಭಿಸಿದೆ.
ಹ್ಯಾಕರ್ಸ್ ಗಳು ಸಾಮಾಜಿಕ ಜಾಲತಾಣದ ವಿವಿಧ ಜನರ ಖಾತೆಗೆ ಲಗ್ಗೆ ಇಟ್ಟು ಹ್ಯಾಕ್ ಮಾಡುತ್ತಿರುವುದು ಒಂದೆಡೆಯಾದರೆ ಕೆಲವು ಆರಕ್ಷಕರ ಫೋಟೋಗಳು ದುರುಪಯೋಗ ಕೂಡ ಆಗುತ್ತಿದೆ.
ಪೆÇಲೀಸರ ಖಾತೆಗಳನ್ನೆ ಹ್ಯಾಕ್ ಮಾಡಲು ಯತ್ನಿಸಿತ್ತಿರುವುದು ನೋಡಿದರೆ ಕೆಲವರಲ್ಲಿ ಆತಂಕ ಮೂಡಿಸಿದೆ.
ಇತ್ತೀಚೆಗಷ್ಟೆ ಎಸ್ಪಿ ರಾಮನಗರ ಖಾತೆ ಕ್ರಿಯೆಟ್ ಮಾಡಿ ಎಸ್ಪಿ ಅವರ ಚಿತ್ರ ಹಾಕಿ ಖಾತೆ ಕ್ರಿಯೆಟ್ ಮಾಡಿರುವುದು ಬೆಳಕಿಗೆ ಬಂದಿತ್ತು.