ವರದಿ: ರಾಮಸಮುದ್ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಇನ್ನೇನು ಕೊರೊನಾಗೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಬೇಕು ಎನ್ನುವಷ್ಟರಲ್ಲೆ ಪೆÇಲೀಸರು ಸಾವನ್ನಪ್ಪುತ್ತಿರುವುದು ಇಲಾಖೆಯಲ್ಲಿನ ಸಿಬ್ಬಂದಿಗಳಿಗೆ ಕಳವಳ ಮೂಡಿಸಿದೆ.
ಚಾಮರಾಜನಗರದ ಗುಂಡ್ಲುಪೇಟೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಎಂಬುವವರೆ ಕೊರೊನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ಕಳೆದ ತಿಂಗಳಿನಲ್ಲಿ ಕೊರೊನಾ ತಪಾಸಣೆಗೆ ಒಳಪಟ್ಟು ಜಿಲ್ಲಾಸ್ಪತ್ರೆಗೆ ಸುರೇಶ್ ದಾಖಲಾಗಿದ್ದರು.
ಆ. 14ರಂದು ಸುರೇಶ್ ಅವರ ಇಚ್ಚೆಯಂತೆ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗೀ ಆಸ್ಪತ್ರೆಗೆ ಎಸ್ಪಿ ದಿವ್ಯ ಅವರ ಸೂಚನೆ ಮೇರೆಗೆ ದಾಖಲಿಸಲಾಗಿತ್ತು.
ಖಾಸಗೀ ಆಸ್ಪತ್ರೆಯಲ್ಲಿನ ಚಿಕಿತ್ಸೆ ಧನಾತ್ಮಕವಾಗಿ ಸ್ಪಂದಿಸಿ ಇನ್ನೆನು ಗುಣಮುಖರಾಗುತ್ತಿದ್ದಾರೆ ಎಂಬುದನ್ನ ಕೇಳಿ ಸಂತಸ ಪಡುತ್ತಿದ್ದ ವೇಳೆ ರಾತ್ರೋ ರಾತ್ರಿ ಸಾವಿನ ಸುದ್ದಿ ಕೇಳಿ ಶಾಕ್ ಉಂಟಾಗಿದೆ.
ಮೃತ ಸುರೇಶ್ ಅವರು 1999ರಲ್ಲಿ ಇಲಾಖೆಗೆ ಸೇರಿ ಮಾಂಬಳ್ಳಿ, ತೆರಕಣಾಂಬಿ, ಬೇಗೂರು, ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಯಲ್ಲಿ ಸೇವೆ ಸಲ್ಲಿಸಿದ್ದರು.
ಚಾಮರಾಜನಗರ ಜಿಲ್ಲೆಯಲ್ಲಿ ಇದುವರೆಗೆ ಮೂರು ಮಂದಿ ಆರಕ್ಷಕ ಸಿಬ್ಬಂದಿಗಳು ಕೊವಿಡ್-19ಗೆ ಬಲಿಯಾಗಿದ್ದಾರೆ. ಚಾಮರಾಜನಗರ ಜಿಲ್ಲಾ ಪೆÇಲೀಸ್ ವ್ಯಾಪ್ತಿಯಲ್ಲಿ ಇದು 2ನೇ ಪ್ರಕರಣವಾಗಿದೆ.
ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ಪರಮೇಶ್ವರಪ್ಪ ಅವರು ಕೊವಿಡ್ ಗೆ ಪ್ರಥಮ ಬಲಿಯಾದರೆ, ಗುಂಡ್ಲುಪೇಟೆ ಠಾಣೆಯ ಕಿಲಗೆರೆಯ ಸುರೇಶ್ ಸಾವು 2ನೇ ಪ್ರಕರಣವಾಗಿದೆ.
ನಂಜನಗೂಡು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಮರಾಜನಗರ ಜಿಲ್ಲೆಯ ಸೋಮಹಳ್ಳಿ ವಾಸಿ ಮಹದೇವಸ್ವಾಮಿ ಕೊರೊನಾದಿಂದ ಸಾವನ್ನಪ್ಪಿದ ಪೊಲೀಸ್ ಇಲಾಖೆ ಸಿಬ್ಬಂದಿ.