ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಪೆÇಲೀಸ್ ಇಲಾಖೆ ವತಿಯಿಂದ ಪೆÇಲೀಸ್ ಹುತಾತ್ಮರ ದಿನಾಚರಣೆಯನ್ನು ಪೆÇಲೀಸ್ ಕವಾಯತ್ ಮೈದಾನ ಆವರಣದೊಳಗೆ ಬುಧವಾರ ನಡೆಸಲಾಯಿತು.
ಹುತಾತ್ಮ ಪೆÇಲೀಸರಿಗೆ ಗೌರವಾರ್ಥ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು. ಚಾಮರಾಜನಗರ ಪೆÇಲೀಸ್ ಅಧೀಕ್ಷಕಿ ದಿವ್ಯ ಸಾರಾ ಥಾಮಸ್ ಅವರು ಪೆÇಲೀಸ್ ಮೃತರ ನಾಮವಾಚನ ಮಾಡಿದರು. ಇದೇ ಮೊದಲ ಬಾರಿಗೆ ಪ್ರತಿಮೆ ಮುಂಭಾಗ ಪೆÇಲೀಸ್ ಮೃತರ ಬಾವಚಿತ್ರ ಹಾಗೂ ಕೊವೆಡ್ ಇಂದ ಮೃತಪಟ್ಟ ಪೆÇಲೀಸ್ ಸಿಬ್ಬಂದಿಗಳ ಭಾವಚಿತ್ರ ಇಟ್ಟು ಅವರಿಗೂ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಸದಾಶಿವ ಎಸ್ ಸುಲ್ತಾನ್ಪುರಿ ಅವರು ಗೌರವ ವಂದನೆ ಸ್ವೀಕರಿಸಿ ಪೆÇಲೀಸರ ಶೌರ್ಯ ಪರಾಕ್ರಮ ಹೊಗಳಿ ಶಾಂತಿಯನ್ನ ಕಾಪಾಡುವಲ್ಲಿ ಅವರ ಪಾತ್ರ ಅಪಾರ. ಅದೂ 2020ರಲ್ಲಿ ಕೊರೊನೊ ಅವಧಿಯಲ್ಲಿ ಪಾತ್ರ ಹೆಚ್ಚಾಗಿದೆ. ಕೆಲವರು ಜೀವವನ್ನ ಪಣಕ್ಕಿಟ್ಟು ಕಾರ್ಯ ಮಾಡಿದ್ದಾರೆ ಎಂದು ಅವರ ಕೆಲಸ ಕಾರ್ಯಗಳನ್ನ ಶ್ಲಾಘಿಸಿದರು.
ವೇದಿಕೆಯಲ್ಲಿ ಎಎಸ್ಪಿ ಅನಿತಾ ಹದ್ದಣ್ಣನ್ನವರ್ ಹಾಜರಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಪಂಚಾಯತ್ ಮುಖ್ಯ ಕಾರ್ಯನಿರ್ವಾಕರ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣರಾವ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಡಾ. ಸಂತೋಷ್ ಕುಮಾರ್, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ. ಜಿ.ಎಂ. ಸಂಜೀವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ ರವಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ ಮುರುಳಿಕೃಷ್ಣ, ಜಿಲ್ಲಾ ಆಸ್ಪತ್ರೆಯ ಆರ್.ಎಂ.ಒ ಡಾ.ಹೆಚ್.ಎಸ್.ಕೃಷ್ಣಪ್ರಸಾದ್, ಜಿಲ್ಲಾ ಆಸ್ಪತ್ರೆಯ ಕೋವಿಡ್-19 ನೋಡಲ್ ಅಧಿಕಾರಿ ಡಾ ಎಂ. ಮಹೇಶ್ ಮತ್ತು ನಗರಸಭೆ ಆಯುಕ್ತ ರಾಜಣ್ಣ ಕಾರ್ಯಕ್ರಮದಲ್ಲಿ ಭಾಗವಹಿದ್ದರು.