ಸಿ.ಟಿ.ರವಿ ಹೆಗಲಿಗೆ ದಕ್ಷಿಣ ಭಾರತದ ಉಸ್ತುವಾರಿ

ಬೆಂಗಳೂರು: ಬಿಜೆಪಿ ಹೈಕಮಾಂಡ್ ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ಮಹತ್ತರದ ಜವಾಬ್ದಾರಿ ವಹಿಸಿದೆ.
ದಕ್ಷಿಣ ಭಾರತದ ಸಂಪೂರ್ಣ ಉಸ್ತುವಾರಿಯನ್ನು ಸಿ.ಟಿ.ರವಿಗೆ ವಹಿಸಲಾಗಿದೆ.
ಹಾಕಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕರ್ನಾಟಕ, ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳ ಉಸ್ತುವಾರಿ ಜವಾಬ್ದಾರಿಯನ್ನು ಸಿ.ಟಿ. ರವಿ ಅವರಿಗೆ ನೀಡಲಾಗಿದೆ.