ಮೈಸೂರು: ವಾಯುವಿಹಾರಕ್ಕೆ ತೆರಳಿದ್ದ ಯುವತಿಯ ಸರ ದೋಚಿದ್ದ ನಾಲ್ಕು ಮಂದಿ ಐನಾತಿ ಕಳ್ಳರನ್ನು ವಿದ್ಯಾರಣ್ಯಪುರಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿ ದ್ದಾರೆ
ರಾಣೆಬೆನ್ನೂರಿನ ನಾಗರಾಜು (28), ದಾವಣಗೆರೆಯ ನವೀನ್ ಕುಮಾರ್ (19), ಆಯಿಷಾ (34), ಕುಮುದಾ (32) ಬಂಧಿತ ಆರೋಪಿಗಳು.
ಮೈಸೂರಿನ ಜೆಎಲ್ ಬಿ ರಸ್ತೆಯ ಅಪೂರ್ವ ಹೋಟೆಲ್ ಬಳಿ ತಮ್ಮ ಶ್ವಾನದೊಂದಿಗೆ ವಾಯುವಿಹಾರಕ್ಕೆ ತೆರಳಿದ್ದ ಯುವತಿ ಸೌಮ್ಯ ಅವರ ಕುತ್ತಿಗೆಯಲ್ಲಿದ್ದ ಸರವನ್ನು ಈ ಕತರ್ನಾಕ್ ಕಳ್ಳರು ಅಪಹರಿಸಿದ್ದರು.
ಈ ಆರೋಪಿಗಳು ಕಾರಿನಲ್ಲಿ ಬೆಂಗಳೂರಿನಲ್ಲಿ ಸರಗಳ್ಳತನಕ್ಕೆ ಯತ್ನಿಸಿ ವಿಫಲರಾಗಿ ಮೈಸೂರಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶ್ವಾನದ ಜೊತೆ ಬೆಳ್ಳಂಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದ ಸೌಮ್ಯಾ ಅವರ 10ಗ್ರಾಂ ತೂಕದ ಸರ ದೋಚುವಾಗ ಸ್ವಲ್ಪ ಪ್ರಮಾಣದ ಚಿನ್ನ ಸೌಮ್ಯಾ ಅವರ ಬಳಿಯೇ ಉಳಿದುಕೊಂಡಿತ್ತು.
ಸೌಮ್ಯಾ ನಾಯಿ ಓಡಿಸುವ ಕೋಲಿನಿಂದಲೇ ಕಾರಿನ ಚಾಲಕನಿಗೆ ಬಾರಿಸಿದ್ದರು. ಅಷ್ಟೇ ಅಲ್ಲ ಕಾರಿನ ನಂಬರ್ ಕೂಡಾ ಗುರುತಿಸಿದ್ದರು.
ಇದು ಪೊಲೀಸರಿಗೆ ಕಳ್ಳರನ್ನು ಹಿಡಿಯಲು ಅನುಕೂಲವಾಗಿದೆ.