ಸಿಬಿಐ ಬಲೆಗೆ ನೈರುತ್ಯ ರೈಲ್ವೆ ಡಿಪಿಒ

ಮೈಸೂರು: ಲಂಚ ಪಡೆಯುತ್ತಿದ್ದ ನೈರುತ್ಯ ರೈಲ್ವೆ ಅಧಿಕಾಯೊಬ್ಬರನ್ನು ಸಿಬಿಐನವರು ಬಂಧಿಸಿದ್ದಾರೆ.
ನೈರುತ್ಯ ರೈಲ್ವೆಯ ಡಿಪಿಒ ಶ್ರೀಕಾಂತ್ ಎಂಬುವರನ್ನು ಸಿಬಿಐ ಅಧಿಕಾರಿಗಳ ತಂಡ ಬಂಧಿಸಿದೆ.
ಶ್ರೀಕಾಂತ್ ಅನುಕಂಪ ಆಧಾರಿತ ನೌಕರಿ ಕಡತಕ್ಕೆ ಸಹಿಹಾಕಲು ವಿನೋದ್ ಕುಮಾರ್ ಎಂಬುವರಿಂದ 1 ಲಕ್ಷರೂ.ಗೆ ಬೇಡಿಕೆ ಇಟ್ಟಿದ್ದರು.
ಮೊದಲ ಕಂತಿನಲ್ಲಿ 25 ಸಾವಿರ ರೂ. ನಗದನ್ನು ನಗರದ ಸಯ್ಯಾಜಿರಾವ್ ರಸ್ತೆಯ ಪಂಚಮುಖಿ ದೇವಾಲಯದ ಬಳಿ ಪಡೆಯುತ್ತಿದ್ದಾಗ ಸಿಬಿಐ ತಂಡ ಶ್ರೀಕಾಂತ್ ರನ್ನು ಬಂಧಿಸಿದೆ.