(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಚಲಿಸುತ್ತಿದ್ದ ಸರ್ಕಾರಿ ಬಸ್ಸಿಗೆ ವ್ಯಕ್ತಿಯೊಬ್ಬ ಏಕಾಏಕಿ ನುಗ್ಗಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ದಲ್ಲಿ ನಡೆದಿದೆ.
ನಗರದ ಸರ್ಕಾರಿ ಬಸ್ ನಿಲ್ದಾಣ ಸಮೀಪ ಈ ಘಟನೆ ನಡೆದಿದೆ.
ಕುದೇರಿನ ಯಲಕ್ಕೂರು ಗ್ರಾಮದ ಅಂಕಶೆಟ್ಟಿ ಅವರ ಮಗ ರಂಗಸ್ವಾಮಿ(೩೪) ಮೃತಪಟ್ಟಿರುವ ವ್ಯಕ್ತಿ.
ಬಸ್ ನಿಲ್ದಾಣ ದೊಳಗಿಂದ ಕೆ ಎಸ್ ಆರ್ ಟಿ ಸಿ ಬಸ್ ಬಂದು ಮುಂದೆ ಸಾಗುತ್ತಿತ್ತು ಅದರ ಹಿಂದೆ ಇತರೆ ವಾಹನಗಳು ಬರುತ್ತಿದ್ದವು.
ಜನರು ನೋಡುತ್ತಿದ್ದಂತೆಯೇ ರಂಗಸ್ವಾಮಿ ಬಸ್ ಮುಂದೆ ಏಕಾಏಕಿ ನುಗ್ಗಿದ ಆಗ ಆತನ ಮೇಲೆ ಬಸ್ ಚಲಿಸಿತು ಹಾಗಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಚಾಮರಾಜನಗರ ಸಂಚಾರಿ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.