ಚಾಮರಾಜನಗರ, ಮೇ 13- ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಹಾಗೂ ಜಾತ್ಯತೀತ ಜನತಾದಳ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ. ಪುಟ್ಟರಂಗಶೆಟ್ಟಿ ಅವರು 83858 ಮತಗಳನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಂ. ಗಣೇಶ್ ಪ್ರಸಾದ್ ಅವರು 107794 ಮತಗಳನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಅವರು 108363 ಮತಗಳನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿ ಎಂ.ಆರ್. ಮಂಜುನಾಥ್ ಅವರು 75632 ಮತಗಳನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ.
ಚಾಮರಾಜನಗರ- ಸಿ. ಪುಟ್ಟರಂಗಶೆಟ್ಟಿ (ಕಾಂಗ್ರೆಸ್) 83858, ವಿ. ಸೋಮಣ್ಣ (ಬಿಜೆಪಿ) 76325, ಡಾ. ಗುರುಪ್ರಸಾದ್ (ಆಮ್ ಆದ್ಮಿ ಪಾರ್ಟಿ) 925, ಮಲ್ಲಿಕಾರ್ಜುನಸ್ವಾಮಿ. ಎ.ಎಂ (ಜಾತ್ಯತೀತ ಜನತಾದಳ) 1082, ಹ.ರಾ. ಮಹೇಶ್ (ಬಹುಜನ ಸಮಾಜ ಪಕ್ಷ) 6461, ಅಭಿಲಾಷ್. ಕೆ (ಉತ್ತಮ ಪ್ರಜಾಕೀಯ ಪಾರ್ಟಿ) 896, ಜಿ.ಎಂ. ಗಾಡ್ಕರ್ (ಸಮಾಜವಾದಿ ಪಾರ್ಟಿ) (ಕರ್ನಾಟಕ) 184, ಪಿ. ಗುರುಸಿದ್ದಪ್ಪ (ಭಾರತೀಯ ಬೆಳಕು ಪಾರ್ಟಿ) 270, ಎಂ. ನಾಗೇಂದ್ರಬಾಬು (ಕರ್ನಾಟಕ ಜನತಾ ಪಕ್ಷ) 147, ಪ್ರಸನ್ನ ಕುಮಾರ್ ಬಿ. (ಕರ್ನಾಟಕ ಪ್ರಜಾ ಪಾರ್ಟಿ) (ರೈತ ಪರ್ವ) 202, ಹೆಚ್.ಸಿ. ಮಹೇಶ್ ಕುಮಾರ್ (ಸರ್ವೋದಯ ಕರ್ನಾಟಕ ಪಕ್ಷ) 198, ವಾಟಾಳ್ ನಾಗರಾಜ್ (ಕನ್ನಡ ಚಳವಳಿ ವಾಟಾಳ್ ಪಕ್ಷ) 658, ಸಿ.ಎಲ್. ಶ್ರೀನಿವಾಸ್ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ) 211, ನಾಗೇಶ್. ಕೆ (ಪಕ್ಷೇತರ) 277, ನಿಂಗರಾಜು (ಪಕ್ಷೇತರ) 569, ನೋಟಾ 790.
ಗುಂಡ್ಲುಪೇಟೆ- ಹೆಚ್.ಎಂ. ಗಣೇಶ್ ಪ್ರಸಾದ್ (ಕಾಂಗ್ರೆಸ್) 107794, ಸಿ.ಎಸ್. ನಿರಂಜನ್ ಕುಮಾರ್ (ಬಿಜೆಪಿ) 71119, ಡಿ. ಗೋವಿಂದರಾಜು (ಬಹುಜನ ಸಮಾಜ ಪಕ್ಷ) 1234, ಮಹದೇವಪ್ರಸಾದ್.ಎಂ (ಆಮ್ ಆದ್ಮಿ ಪಾರ್ಟಿ) 507, ಮಂಜುನಾಥ. ಕೆ.ಎಸ್. (ಜಾತ್ಯತೀತ ಜನತಾದಳ) 1850, ಎನ್. ಅಂಬರೀಷ್ (ಕರ್ನಾಟಕ ಜನತಾ ಪಕ್ಷ) 120, ಗಿರೀಶ್.ಕೆ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ) 78, ಕೆ. ಬಸವಶೆಟ್ಟಿ (ಭಾರತೀಯ ಬೆಳಕು ಪಾರ್ಟಿ) 77, ಜಯಶ್ರೀ (ಪಕ್ಷೇತರ) 148, ಟಿಪ್ಪುಸುಲ್ತಾನ್ (ಪಕ್ಷೇತರ) 169, ಹೆಚ್.ಎಸ್. ತೋಂಟದಾರ್ಯಸ್ವಾಮಿ (ಪಕ್ಷೇತರ) 106, ಪ್ರತಾಪ್.ಎಂ (ಪಕ್ಷೇತರ) 184, ಮಹೇಶ್.ಎಂ (ಪಕ್ಷೇತರ) 297, ಸಿದ್ದರಾಜು. ಹೆಚ್.ಎಸ್. (ಪಕ್ಷೇತರ) 547, ಎಂ.ಪಿ. ಸುನೀಲ್ (ಪಕ್ಷೇತರ) 2227, ನೋಟಾ 1530.
ಕೊಳ್ಳೇಗಾಲ- ಎ.ಆರ್. ಕೃಷ್ಣಮೂರ್ತಿ (ಕಾಂಗ್ರೆಸ್) 108363, ಎನ್. ಮಹೇಶ್ (ಬಿಜೆಪಿ) 48844, ಕೆಂಪರಾಜು. ಬಿ (ಆಮ್ ಆದ್ಮಿ ಪಾರ್ಟಿ) 807, ಬಿ. ಪುಟ್ಟಸ್ವಾಮಿ (ಜಾತ್ಯತೀತ ಜನತಾದಳ) 3925, ನಿಂಗರಾಜ್. ಜಿ. (ಕರ್ನಾಟಕ ಪ್ರಜಾ ಪಾರ್ಟಿ) (ರೈತ ಪರ್ವ) 291, ನಿಂಗರಾಜು. ಎಸ್. (ಕರ್ನಾಟಕ ಜನತಾ ಪಕ್ಷ) 173, ಎನ್. ರವಿಕುಮಾರ್ (ಕರ್ನಾಟಕ ರಾಷ್ಟ್ರ ಸಮಿತಿ) 142, ವಿ. ವಿನಯ್ ಕುಮಾರ್ (ಉತ್ತಮ ಪ್ರಜಾಕೀಯ ಪಾರ್ಟಿ) 1022, ವಿನೋದ್. ಎಸ್ (ಭಾರತೀಯ ಬೆಳಕು ಪಾರ್ಟಿ) 143, ಕಂದಳ್ಳಿ ಮಹೇಶ್ (ಪಕ್ಷೇತರ) 352, ಬಿ. ರಾಚಯ್ಯ ಕಿನಕನಹಳ್ಳಿ (ಪಕ್ಷೇತರ) 1519, ರಾಜು.ಕೆ (ಪಕ್ಷೇತರ) 218, ರಾಜೇಶ್.ಎಂ (ಪಕ್ಷೇತರ) 309, ನೋಟಾ 1664.
ಹನೂರು- ಎಂ.ಆರ್. ಮಂಜುನಾಥ್ (ಜಾತ್ಯತೀತ ಜನತಾದಳ) 75632, ಆರ್. ನರೇಂದ್ರ (ಕಾಂಗ್ರೆಸ್) 57978, ಡಾ. ಪ್ರೀತನ್. ಕೆ.ಎನ್. (ಬಿಜೆಪಿ) 35870, ಮಾದೇಶ. ಎಂ (ಬಹುಜನ ಸಮಾಜ ಪಕ್ಷ) 1302, ಹರೀಶ್. ಕೆ (ಆಮ್ ಆದ್ಮಿ ಪಾರ್ಟಿ) 2515, ಟಿ. ಜಾನ್ ಪೀಟರ್ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ) 1596, ಎನ್. ಪ್ರದೀಪ್ ಕುಮಾರ್ (ಉತ್ತಮ ಪ್ರಜಾಕೀಯ ಪಾರ್ಟಿ) 437, ಜಿ. ಮುರುಗೇಶನ್ (ಕರ್ನಾಟಕ ಪ್ರಜಾ ಪಾರ್ಟಿ) (ರೈತ ಪರ್ವ) 131, ಡಿ. ಶ್ರೀಕಂಠಸ್ವಾಮಿ (ಸರ್ವೋದಯ ಕರ್ನಾಟಕ ಪಕ್ಷ) 666, ಸಿದ್ದಪ್ಪ. ಆರ್ (ಕಂಟ್ರಿ ಸಿಟಿಜನ್ ಪಾರ್ಟಿ) 115, ಸುರೇಶ್. ಎಂ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ) 176, ಎಂ. ನಾಗರಾಜು (ಪಕ್ಷೇತರ) 227, ಪ್ರದೀಪ್ ಕುಮಾರ್. ಎಂ (ಪಕ್ಷೇತರ) 436, ಮುಜಾಮಿಲ್ ಪಾಷ (ಪಕ್ಷೇತರ) 256, ಟಿ. ಮುತ್ತುರಾಜ್ (ಪಕ್ಷೇತರ) 325, ರಾಜಶೇಖರ್ (ಪಕ್ಷೇತರ) 847, ಸಿ. ಸಿದ್ದಾರ್ಥನ್ (ಪಕ್ಷೇತರ) 894, ಸೆಲ್ವರಾಜ್. ಎಸ್. (ಪಕ್ಷೇತರ) 361, ನೋಟಾ 596.