ಮೈಸೂರು: ಕನ್ನಡದ ರಾ ್ಯಪರ್ ಚಂದನ್ ಶೆಟ್ಟಿ ಇದೀಗ ಮತ್ತೊಂದು ವಿವಾದದ ಸುಳಿಗೆ ಸಿಲುಕಿಕೊಂಡಿದ್ದಾರೆ.
ಕೋಲುಮಂಡೆ ಜಂಗಮದೇವ ಹಾಡನ್ನು ಅಶ್ಲೀಲವಾಗಿ ಚಿತ್ರೀಕರಿಸಿ ಜನರ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಚಂದನ್ ಶೆಟ್ಟಿ ಗುರಿಯಾಗಿದ್ದಾರೆ.
ಕೋಲುಮಂಡೆ ಜಂಗಮದೇವ ಹಾಡನ್ನು ತನ್ನದೇ ಶೈಲಿಯಲ್ಲಿ ಹಾಡಿರುವ ಚಂದನ್ ಶೆಟ್ಟಿ ಹೊಸ ಹಾಡಿಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮಲೈಮಹದೇಶ್ವರ ಸ್ವಾಮಿ ಇತಿಹಾಸ ತಿರುಚಿ ಹಾಡು ರಚಿಸಿರುವ ಆರೋಪ ಕೇಳಿ ಬಂದಿದೆ.
ಹಳೆ ಮೈಸೂರು ಭಾಗದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಚಂದನ್ ಶೆಟ್ಟಿ ಎಂಬ ಆರೋಪ ಎಲ್ಲೆಡೆ ಕೇಳಿ ಬಂದಿದೆ.
ಶರಣೆ ಸಂಕಣ್ಣೆಯವರನ್ನು ಅಶ್ಲೀಲವಾಗಿ ಪ್ರದರ್ಶಿಸಲಾಗಿದೆ. ಆ ಮೂಲಕ ಶರಣೆ ಸಂಕಣ್ಣೆಯವರನ್ನು ಅವಮಾನಿಸಲಾಗಿದೆ. ಹಳೆ ಜಾನಪದ ಹಾಡೊಂದನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡು ವಿಕೃತಿ ಮೆರೆದಿದ್ದಾರೆ ಎಂದು ಮೈಸೂರಿನ ಬಿಜೆಪಿ ಮುಖಂಡ ಜೋಗಿ ಮಂಜು ಆರೋಪಿಸಿದ್ದಾರೆ.
ಈ ಕೂಡಲೆ ಚಂದನ್ ಹಾಡಿರುವ ಕೋಲುಮಂಡೆ ಹಾಡನ್ನು ಯೂಟ್ಯೂಬ್ ನಿಂದ ತೆಗೆಯಬೇಕು. ಇಲ್ಲವಾದಲ್ಲಿ ಚಂದನ್ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದವರು ಎಚ್ಚರಿಸಿದ್ದಾರೆ.
ಮೈಸೂರು ದಸರಾ ಯುವ ವೇದಿಕೆಯಲ್ಲಿ ತನ್ನ ಹುಡುಗಿಗೆ ರಿಂಗ್ ತೊಡಿಸಿ ಪ್ರಪೆÇೀಸ್ ಮಾಡುವ ಮೂಲಕ ವಿವಾದ ಸೃಷ್ಟಿಸಿಕೊಂಡಿದ್ದ ಪ್ರಕರಣಕ್ಕೆ ಇನ್ನೂ 1 ವರ್ಷ ಆಗಿಲ್ಲ ಆಗಲೇ ಮತ್ತೊಂದು ಹಗರಣವನ್ನು ಚಂದನ್ ಶೆಟ್ಟಿ ಮೈ ಮೇಲೆ ಎಳೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.