ಬೆಂಗಳೂರು: ಮತದಾರರ ಜಾಗೃತಿ ಹೆಸರಲ್ಲಿ ಖಾಸಗಿ ಮಾಹಿತಿ ಸಂಗ್ರಹಕ್ಕಿಳಿದಿದ್ದ ಚಿಲುಮೆ ಸಂಸ್ಥೆ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ರಮ ಕೈಗೊಂಡಿದೆ.
ಮತದಾರರ ಜಾಗೃತಿ ಬದಲು ಅಕ್ರಮ ಮಾಹಿತಿ ಸಂಗ್ರಹಕ್ಕೆ ಬಿಬಿಎಂಪಿ ಬ್ರೇಕ್ ಹಾಕಿದೆ.
ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಲಾಗಿದೆ.
ಚಿಲುಮೆ ಸಂಸ್ಥೆಯ ಲೋಕೇಶ್ ಕೆ.ಎಂ ವಿರುದ್ಧ ಬಿಬಿಎಂಪಿ ಎಫ್ ಐಆರ್ ದಾಖಲಿಸಿದೆ.
ಬಿಬಿಎಂಪಿ ಹೆಸರು, ಮತಗಟ್ಟೆ ಅಧಿಕಾರಿ ಎಂಬ ಪದನಾಮ ದುರುಪಯೋಗ ಹಿನ್ನಲೆ ಎಫ್ ಐಆರ್ ದಾಖಲಿಸಲಾಗಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ದುರುಪಯೋಗ ಪತ್ತೆ ಹಿನ್ನಲೆ ಈ ಕ್ರಮವನ್ನು ಜರುಗಿಸಲಾಗಿದೆ.
ಚಿಲುಮೆ ಸಂಸ್ಥೆಯ ಲೋಕೇಶ್ ಎಂಬಾತನ ವಿರುದ್ಧ ಕಾಡುಗೋಡಿ ಪೊಲೀಸರಿಗೆ ಬಿಬಿಎಂಪಿ ದೂರು ನೀಡಿದೆ.
ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬಿಬಿಎಂಪಿ ಅಭಿಯಾನ ನಡೆಸಲು ಚಿಲುಮೆ ಸಂಸ್ಥೆಗೆ ಅನುಮತಿ ನೀಡಿತ್ತು.
ಆದರೆ ಚಿಲುಮೆ ಸಂಸ್ಥೆಯು ಬಿಬಿಎಂಪಿ ಗುರುತಿನ ಚೀಟಿ ದುರುಪಯೋಗ ಪಡಿಸಿಕೊಂಡು ಬಿಬಿಎಂಪಿ ಮತಗಟ್ಟೆ ಸಮನ್ವಯಾಧಿಕಾರಿ ಎಂದು ಸಂಸ್ಥೆಯು ಐಡಿ ನೀಡಿತ್ತು.
ಬಿ ಎಲ್ ಒ ಎಂದು ಸುಳ್ಳು ಐಡಿ ಸೃಷ್ಟಿಸಿಕೊಂಡು ಮನೆ, ಮನೆಗೆ ತೆರಳಿ ಮತದಾರರ ಮಾಹಿತಿ ಸಂಗ್ರಹಿಸಿತ್ತು.
ಈ ಹಿನ್ನೆಲೆಯಲ್ಲಿ ಚಿಲುಮೆ ಸಂಸ್ಥೆಯ ಲೋಕೇಶ್ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಪಾಲಿಕೆ ಮನವಿ ಮಾಡಿದೆ.