ಬೆಂಗಳೂರು: ನಟಿ ಸಂಯುಕ್ತಾ ಹೆಗ್ಡೆ ಚಿತ್ರೀಕರಣದ ವೇಳೆ ತಲೆ ಹಾಗೂ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.
ಬುಧವಾರ ಕಂಠೀರವ ಸ್ಟುಡಿಯೋದಲ್ಲಿ ಕ್ರೀಮ್ ಚಿತ್ರದ ಆಕ್ಷನ್ ಸೀನ್ ಗಳ ಚಿತ್ರೀಕರಣ ನಡೆಯುತ್ತಿತ್ತು.
ಆ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಸಾಹಸ ನಿರ್ದೇಶಕ ಪ್ರಭು ಅವರು ಸಂಯುಕ್ತಾಗೆ ಡ್ಯೂಪ್ ಬಳಸಲು ಸಲಹೆ ನೀಡಿದರೂ ನಟಿ ಒಪ್ಪದೆ, ತಾವೇ ಖುದ್ದಾಗಿ ಸ್ಟಂಟ್ ಮಾಡಲು ಮುಂದಾದರು.
ಆಕೆ ಸಾಹಸ ಕಲಾವಿದರ ಜತೆ ಫೈಟ್ ಮಾಡುವ ವೇಳೆ ಜಾರಿ ಬಿದ್ದಿದ್ದಾರೆ ಆಗ ತಲೆ ಹಾಗೂ ಕಾಲಿಗೆ ಪೆಟ್ಟು ಬಿದ್ದಿದೆ.
ತಕ್ಷಣ ಅವರನ್ನು ಕಣ್ವ ಆಸ್ಪತ್ರೆಗೆ ದಾಖಲಿಸಲಾಯಿತು.
ಕಾಲಿಗೆ ಪೆಟ್ಟಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಅವರಿಗೆ 15 ದಿನಗಳ ಕಾಲ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ.
ಇನ್ನು ಮೂರು ದಿನಗಳಲ್ಲಿ ಚಿತ್ರೀಕರಣವೇ ಮುಗಿದುಹೋಗುತ್ತಿತ್ತು ಅಷ್ಟರಲ್ಲಿ ಈ ಘಟನೆ ನಡೆಯಿತು ಎಂದು ಘಟನೆ ಸಂಬಂಧ ನಿರ್ಮಾಪಕ ದೇವೇಂದ್ರ ಮಾಹಿತಿ ನೀಡಿದರು.
ಅಭಿಷೇಕ್ ಬಸಂತ್ ನಿರ್ದೇಶನದಲ್ಲಿ ಕ್ರೀಮ್ ಚಿತ್ರ ಮೂಡಿಬರುತ್ತಿದೆ. ಈಗಾಗಲೇ ಶೇಕಡಾ 90 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ.