ಚಿಕ್ಕಮಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಅಲ್ಲಂಪುರ ವಾಸಿ ನಾಗರಾಜ್ (29) ಬಂಧಿತ ಆರೋಪಿ.
ಬಂಧಿತನಿಂದ ಪೊಲೀಸರು 1 ಕೆ.ಜಿ. 280 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಪಟಾಕಿ ಮೈದಾನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರು ನಾಗರಾಜ್ ನನ್ನು ಮಾಲು ಸಮೇತ ಬಂಧಿಸಿದ್ದಾರೆ.
ನಾಗರಾಜ್ ಗಾಂಜಾವನ್ನು ಚಿಕ್ಕಚಿಕ್ಕ ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದ. ಒಂದು ಪಾಕೆಟ್ ಗೆ 500 ರೂ.ಪಾಯಿ ದರದಲ್ಲಿ ನಗರದ ಯುವಕರು, ಕೂಲಿಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದಾಜು 30 ಸಾವಿರ ಬೆಲೆಯ ಗಾಂಜಾ ತುಂಬಿದ ಪ್ಯಾಕೆಟ್ ಗಳು ಹಾಗೂ ಬೈಕನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ನಗರ ಠಾಣೆ ಪಿಎಸ್ಐ ತೇಜಸ್ವಿ ಮತ್ತು ತಂಡ ಕಾರ್ಯಾಚರಣೆ ನಡೆಸಿ ಈ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.