ಹುಬ್ಬಳ್ಳಿ: ಚಿತ್ರರಂಗ ಇರಲಿ ಇನ್ಯಾವುದೇ ಇರಲಿ ನಾವು ಬಿಡಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಗೃಹ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಜ್ಯದಲ್ಲಿನ ಡ್ರಗ್ಸ್ ದಂಧೆ ಬಗ್ಗೆ ಕೇಳಲಾದ ಪ್ರಶ್ನೆಗೆ ಗೃಹ ಸಚಿವರು ಪ್ರತಿಕ್ರಿಯಿಸಿದರು.
ಡ್ರಗ್ಸ್ ಪ್ರಭಾವಕ್ಕೆ ಚಿತ್ರರಂಗವಲ್ಲದೇ ಬಹಳಷ್ಟು ಜನ ಒಳಗಾಗಗಿದ್ದಾರೆ. ಸದ್ಯ ನಾವು ಅದರ ಮೂಲ ಹುಡುಕುತ್ತಿದ್ದೇವೆ. ಚಿತ್ರರಂಗ ಇರಲಿ ಇನ್ಯಾವುದೇ ಇರಲಿ ನಾವು ಬಿಡಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಪೆÇಲೀಸರ ಮೇಲೆ ರಾಜಕಾರಣಿಗಳ ಪ್ರಭಾವ ಸತ್ಯಕ್ಕೆ ದೂರ ಎಂದು ಅವರು ತಿಳಿಸಿದರು.
ಇಲ್ಲಿಯವರೆಗೆ ಕೇವಲ ಗಾಂಜಾ ವ್ಯವಹಾರ ಮಾಡೋರನ್ನು ಬಂಧಿಸುತ್ತಿದ್ದೇವು. ಈಗ ಡಾರ್ಕ್ ನೆಟ್ ಎನ್ನೋ ಆನ್ ಲೈನ್ ವೆಬ್ ಸೈಟ್ ನ್ನು ಭೇಧಿಸಿದ್ದೇವೆ. ಪೆÇೀಸ್ಟಲ್ ಮೂಲಕನೂ ಸಪ್ಲೈ ಆಗ್ತಿತ್ತು. ಅಂತರಾಜ್ಯ ವಿದೇಶದ ಮೂಲವನ್ನ ಬೇಧಿಸುತ್ತಿದ್ದೇವೆ ಎಂದರು.
ಎನ್ ಸಿಬಿಯವರು ಕೆಲವು ಸಿಂಥೆಟಿಕ್ ಡ್ರಗ್ಸ್ ವ್ಯವಹಾರ ಮಾಡೋರನ್ನ ಬಂಧಿಸಿದ್ದಾರೆ. ಅದರಲ್ಲಿ ಕೆಲವು ಚಿತ್ರರಂಗದವರಿದ್ದಾರೆ ಎನ್ನೋ ಮಾಹಿತಿ ಇದೆ ಎಂದರು.
ಇಂದ್ರಜಿತ್ ಲಂಕೇಶ್ ಅವರಿಗೆ ನೋಟಿಸ್ ನೀಡಿದ್ದೆವೆ. ಅವರು ಏನ್ ಮಾಹಿತಿ ಕೊಡ್ತಾರೆ ನೋಡೋಣ ಎಂದು ಗೃಹ ಸಚಿವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.