ಚಿತ್ರ ಮಂದಿರಗಳಿಗೆ ಲಗ್ಗೆ ಇಟ್ಟಿದೆ ಲೂಸ್ ಮಾದ ಯೋಗಿಯ ಒಂಬತ್ತನೇ ದಿಕ್ಕು

ಬೆಂಗಳೂರು : ಆಕ್ಷನ್, ಕ್ರೈಮ್, ಥ್ರಿಲ್ಲರ್ ಸಿನಿಮಾ ಅಂದರೆ ಹೀಗೆ ಇರಬೇಕು ಎಂಬ ಸಿದ್ದ ಸೂತ್ರವನ್ನು ಬಿಟ್ಟು, ಅದನ್ನು ಬೇರೆಯದೇ ರೀತಿ ಹೇಳುವ ಪ್ರಯತ್ನವೇ ಒಂಬತ್ತನೇ ದಿಕ್ಕು.

ದಯಾಳ್ ಪದ್ಮನಾಭನ್ ಈ ಹಿಂದೆ ರಂಗನಾಯಕಿ ಚಿತ್ರದ ಮೂಲಕ ಹೆಣ್ಣಿನ ಆರ್ತನಾದ, ಆಕ್ರೋಶವನ್ನು ಹೊರಹಾಕಿದ್ದರು.

ಈಗ ಒಂದು ಕಂಟೆಂಟ್ ಸಿನಿಮಾವನ್ನು ಕಮರ್ಷಿಯಲ್ ಆಗಿ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ.

ಇದೇ ಶುಕ್ರವಾರದಿಂದ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಒಂಬತ್ತನೇ ದಿಕ್ಕು‌ ಚಿತ್ರ ಬಿಡುಗಡೆಯಾಗಿದೆ.

ಈ ಚಿತ್ರದ ನಾಯಕ ಲೂಸ್ ಮಾದ ಯೋಗಿ.

ಈ ಚಿತ್ರದ ನಾಯಕ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಟ್ರಾವೆಲ್ ಏಜೆನ್ಸಿಯೊಂದನ್ನು ನಡೆಸುವ ಯುವಕನಾಗಿರುತ್ತಾನೆ.

ನಾಯಕಿ ಅದಿತಿ ಪ್ರಭುದೇವ ಶಿವಮೊಗ್ಗದ ಟ್ರೆಡಿಷನಲ್ ಫ್ಯಾಮಿಲಿಯ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಚಿತ್ರಗಳನ್ನು ನೀಡುತ್ತ ಬಂದಿರುವ ದಯಾಳ್ ಪದ್ಮನಾಭನ್ ಅವರ ನಿರ್ದೇಶನದ ಮತ್ತೊಂದು ಕ್ರೈಮ್, ಥ್ರಿಲ್ಲರ್ ಚಿತ್ರ ಇದಾಗಿದೆ.

ಯೋಗಿ ತಂದೆಯ ಪಾತ್ರದಲ್ಲಿ ಹಿರಿಯನಟ ಅಶೋಕ್ ಕಾಣಿಸಿಕೊಂಡಿದ್ದು, ಸಾಯಿ ಕುಮಾರ್, ಸುಂದರ್, ರಮೇಶ್ ಭಟ್, ಶೃತಿ ನಾಯಕ್, ಪ್ರಶಾಂತ್ ಸಿದ್ಧಿ, ಮುನಿ ಮುಂತಾದವರು ಈ ಚಿತ್ರದಲ್ಲಿದ್ದಾರೆ.

ಮಣಿಕಾಂತ್ ಕದ್ರಿ ಅವರ ಸಂಗೀತ ಸಂಯೋಜನೆ ಮತ್ತು ರಾಕೇಶ್ ಅವರ ಛಾಯಾಗ್ರಹಣವಿದೆ.