ಬೆಳಗಾವಿ: ಮುಖ್ಯಮಂತ್ರಿ ಕುರ್ಚಿ ವಿಷಯ ಮತ್ತೆ ಮುನ್ನಲೆಗೆ ಬರುತ್ತಿದ್ದು ಸಧ್ಯಕ್ಕೆ ಈ ಪಟ್ಟ ಖಾಲಿ ಇಲ್ಲ ಈ ಬಗ್ಗೆ ಯಾರೂ ಕನಸನ್ನು ಕಾಣುವುದು ಬೇಡ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರೇ ಮುಂದುವರೆಯುತ್ತಾರೆ. ಕೆಲವರು ಬೇಕೆಂದೆ ಗಾಳಿ ಸುದ್ದಿಹರಡುತ್ತಾರೆ ಇದನ್ನೆಲ್ಲ ಯಾರೂ ನಂಬಬಾರದು ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ನಮ್ಮ ನಾಯಕರು ಈಗಾಗಲೆ ಹೇಳಿದ್ದಾರೆ. ಕ್ಷೇತ್ರದ ಜನರು ಪ್ರೀತಿಯಿಂದ ಅವರನ್ನು ಆಯ್ಕೆ ಮಾಡಿದ್ದಾರೆ. ಅದಕ್ಕಾಗಿ ಭಾವನಾತ್ಮಕವಾಗಿ ಸಿಎಂ ಮಾತನಾಡಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಜತೆಗೆ ಯಾರೂ ಸಿಎಂ ಆಗುವ ಕನಸು ಕಾಣಬೇಡಿ ಈ ಸೀಟಿ ಖಾಲಿ ಇಲ್ಲ ಎಂದು ತಿಳಿಸಿದರು.