ಶಿವಮೊಗ್ಗ: ಮೇಕೆದಾಟು ಪಾದಯಾತ್ರೆ ಮಾಡುವ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದರು. ಅದು ಭಗ್ನವಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯ ವಾಡಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,
ಪಾದಯಾತ್ರೆ ಮೊಟಕುಗೊಳ್ಳುವ ಮೂಲಕ ಅವರಿಬ್ಬರ ಕನಸು ಭಗ್ನಗೊಳ್ಳವಂತಾಯಿತು ಎಂದು ಹೇಳಿದರು.
ತಿಹಾರ್ ಜೈಲಿನಲ್ಲಿದ್ದು ಬಂದದ್ದ ಶಿವಕುಮಾರ್ ಅವರಿಗೆ ನ್ಯಾಯಾಂಗದ ಶಕ್ತಿ ಏನೆಂದು ಗೊತ್ತಿದೆ. ಹೀಗಾಗಿ ಪಾದಯಾತ್ರೆ ರದ್ದುಗೊಳಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕ ಹೈಕೋರ್ಟ್ ನಿರ್ದೇಶನಗಳ ಬಳಿಕ ಅಂತಿಮವಾಗಿ ಪಾದಯಾತ್ರೆಯನ್ನು ರದ್ದುಗೊಳಿಸಿದ್ದಾರೆ. ಇದರಿಂದ ಇಬ್ಬರ ಕನಸುಗಳು ಭಗ್ನಗೊಂಡಿವೆ ಎಂದರು.
ಜನರ ಮೇಲಿನ ಕಾಳಜಿಯಿಂದ ಅವರು ಪಾದಯಾತ್ರೆ ನಿಲ್ಲಿಸಿಲ್ಲ, ನ್ಯಾಯಾಲಯ ಕ್ರಮ ಕೈಗೊಳ್ಳುವ ಭೀತಿಯಿಂದ ಕಾಂಗ್ರೆಸ್ ನಾಯಕರು ಪಾದಯಾತ್ರೆ ರದ್ದುಗೊಳಿಸಿದ್ದಾರೆಂದು ತಿಳಿಸಿದರು.