ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ ಐ ಆರ್ ದಾಖಲಾಗುವುದು ವಿಳಂಬವಾಗುತ್ತಿದೆ.
ಕಾಯ್ದೆಗಳ ವಿಚಾರದಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಎಫ್ ಐ ಆರ್ ಮಾಡಲು ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಮೇಲೆ ಕೇಂದ್ರ ಕಚೇರಿಯ ಅಭಿಪ್ರಾಯ ಕೇಳಿ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್ ಅವರು ಬಿಎನ್ ಎಸ್ ಕಾಯ್ದೆ ಅಡಿ ಎಫ್ ಐ ಆರ್ ದಾಖಲಿಸಬೇಕಾ ಅಥವಾ ಸಿಆರ್ ಪಿಸಿ, ಐಪಿಸಿ ಸೆಕ್ಷನ್ ಅಡಿ ಎಫ್ ಐ ಆರ್ ದಾಖಲಿಸಬೇಕಾ ಎಂಬ ಬಗ್ಗೆ ಸ್ಪಷ್ಟತೆ ಕೊಡಿ ಎಂದು ಪತ್ರ ಬರೆಯಲಿದ್ದಾರೆ.
ಲೋಕಾಯುಕ್ತರ ಈ ಪತ್ರಕ್ಕೆ ಸೂಕ್ತ ಉತ್ತರ ಬಂದ ಮೇಲೆ ಎಫ್ ಐ ಆರ್ ದಾಖಲು ಪ್ರಕಿಯೆ ಆರಂಭವಾಗಬೇಕುದೆ. ಹಾಗಾಗಿ ಇಂದು ಸಿಎಂ ವಿರುದ್ಧ ಎಫ್ ಐ ಆರ್ ದಾಖಲಾಗುವುದು ಅನುಮಾನ ಎಂದೇ ಹೇಳಲಾಗುತ್ತಿದೆದೆ.
ಹಳೆಯ ಸಿ ಆರ್ ಪಿ ಸಿ ಕಾಯ್ದೆಯಡಿ ದೂರು ದಾಖಲಿಸಿಕೊಂಡರೆ ಕೂಡಲೇ ಎಫ್.ಐ.ಆರ್ ದಾಖಲು ಮಾಡಬೇಕಾಗುತ್ತದೆ. ಆದರೆ, ಪ್ರಸ್ತುತ ಜಾರಿಯಲ್ಲಿರುವ ನೂತನ ಬಿ.ಎನ್.ಎಸ್. ಕಾಯ್ದೆಯಡಿ ದೂರು ದಾಖಲಾದರೆ, ಮೊದಲು ನೋಟಿಸ್ ಜಾರಿಗೊಳಿಸಿ ಅವರಿಂದ ಉತ್ತರ ಪಡೆದ ನಂತರ ಎಫ್.ಐ.ಆರ್. ದಾಖಲಿಸಬೇಕಾಗುತ್ತದೆ.
ಹಾಗಾಗಿ ಲೋಕಾಯುಕ್ತ ಅಧಿಕಾರಿಗಳು ಗೊಂದಲದಲ್ಲಿದ್ದು ಹಳೆಯ ಸಿ.ಆರ್.ಪಿ.ಸಿ ಕಾಯ್ಡೆಯಡಿ ದೂರು ದಾಖಲಿಸಬೇಕೋ ಅಥವಾ ಹೊಸ ಬಿ.ಎನ್.ಎಸ್.ಕಾಯ್ದೆಯಡಿ ದೂರು ದಾಖಲಿಸಬೇಕೋ ಎಂದು ತಿಳಿಯದೆ ಕೇಂದ್ರ ಕಚೇರಿ ಮೊರೆ ಹೋಗಿದ್ದಾರೆ.