ಅವ್ಯವಸ್ಥೆ ತಾಣವಾದ ಕೊವಿಡ್ ಕೇರ್ ಸೆಂಟರ್

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಬರ್ತಾ ಬರ್ತಾ ಕೊವಿಡ್ ಕೇರ್ ಸೆಂಟರ್ ಗಳು ಅವ್ಯವಸ್ಥೆಯ ಕೇಂದ್ರಗಳಾಗಿ ಮಾರ್ಪಡುತ್ತಿವೆ.
ಇದಕ್ಕೆ ತಾಜಾ ಉದಾಹರಣೆ ಚಾಮರಾಜನಗರದ ಬೇಡನಪುರ ಸಮೀದ ಕೊವಿಡ್ ಕೇಂದ್ರ.
ಈ ಕೇಂದ್ರದೊಳಗೆ ಪ್ರವೇಶ ಮಾಡುವವರು ಭಯದ ವಾತಾವರಣದಲ್ಲೆ ಇರಬೇಕಾದ ದುಸ್ಥಿತಿ ಇದೆ ಎಂದರೆ ತಪ್ಪಾಗಲಾರದು. ಚಾಮರಾಜನಗರ ಬೇಡರಪುರ ಸಮೀಪದ ಕೊವಿಡ್ ಕೇರ್ ಸೆಂಟರ್ ನಲ್ಲಿ ಹಿಂದೊಮ್ಮೆ ಅವ್ಯವಸ್ಥೆಯ ಆಗರವಾಗಿ ಸುದ್ದಿಯಲ್ಲಿತ್ತು.
ಈಗ ಮತ್ತೆ ಅದೇ ಕೇಂದ್ರದಲ್ಲಿ ಅನೈರ್ಮಲ್ಯದ ಜೊತೆ ಮಳೆರಾಯನ ಅವಾಂತರದಿಂದ ನೀರು ಕೊಠಡಿಗೆಲ್ಲ ಪ್ರವೇಶಿಸಿ ಕೊರೊನಾ ಸೋಂಕಿತರು ಪರದಾಡುವಂತಾಗಿದೆ.
ಭಾನುವಾರವಾದ (ಅ. 11) 10.30 ಆದರೂ ಈ ಕೇಂದ್ರದಲ್ಲಿರುವ ಸೋಂಕಿತರಿಗೆ ತಿಂಡಿ ಬರದೆ ಪರದಾಡಿದ್ದಾರೆ.
ರಾತ್ರಿ ಸುರಿದ ಮಳೆಗೆ ಕೊಠಡಿಯೊಳಗೆ ನೀರು ಬಂದಿದೆ ಎಂದು ಕೆಲವರು ದೂರಿದ್ದಾರೆ.
ಒಟ್ಟಾರೆ ಕೊವೆಡ್ ಕೇರ್ ಸೆಂಟರ್ ನ ಸೋಂಕಿತರ ಸಮಸ್ಯೆಗೆ ಜಿಲ್ಲಾಡಳಿತ, ಅಧಿಕಾರಿಗಳು ಡೋಂಟ್ ಕೇರ್ ಎನ್ನುತ್ತಿದ್ದಾರೆ.