ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೋಕಿನ ಸುಪ್ರಸಿದ್ದ ವೀರಾಂಜನೇಯ ಸನ್ನಿಧಿಯಲ್ಲಿ ಜೀಸಸ್ ಫೋಟೊ ಬರೋದಕ್ಕೆ ಕಾರಣ ಸಬ್ ಇನ್ಸ್ ಪೆಕ್ಟರ್ ಒಬ್ಬರು ಎಂದು ಹೇಳಲಾಗುತ್ತಿದೆ.
ಆ. 5ರಂದು ಎಸ್ಪಿ ದಿವ್ಯ ಅವರು ವೀರಾಂಜನೇಯ ದೇವಸ್ಥಾನಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಜೀಸಸ್ ಭಾವ ಚಿತ್ರ ಇರಿಸಿ ಪೂಜೆ ಸಲ್ಲಿಸಿದ್ದರು ಎಂದು ವ್ಯಾಪಕ ಚರ್ಚೆ ನಡೆದಿತ್ತು.
ಆದರೆ ಅದಕ್ಕೂ ಇದಕ್ಕೂ ಯಾವುದೇ ಸಂಬಂದವಿಲ್ಲ ಎಂದು ದೇವಾಲಯದ ಅರ್ಚಕರು ಸ್ಪಷ್ಟನೆ ನೀಡಿದ್ದರು. ವಿಪರ್ಯಾಸವೆಂದರೆ ಅರ್ಚಕ ರಾಘವನ್ ಗೆ ದಾರಿ ತಪ್ಪಿಸಿದ್ದೆ ಸಬ್ ಇನ್ಸ್ ಪೆಕ್ಟರ್ ಅಥವಾ ಇನ್ಸ್ ಪೆಕ್ಟರ್ ಒಬ್ಬರು ಎಂಬುದು ತಿಳಿದುಬಂದಿದೆ.
ಪೆÇಲೀಸರು ಎಲ್ಲಾ ಜಾತಿ ಧರ್ಮ ಮರೆತು ದಕ್ಷ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕದವರು ‘ಬಕೆಟ್’ ವ್ಯವಸ್ಹೆಗೆ ಜೋತು ಬಿದ್ದು ಕೆಲಸ ಮಾಡುತ್ತಿರುವುದು ದುರಂತವೇ ಸರಿ.
ದಕ್ಷಿಣ ವಲಯ ಪೆÇಲೀಸ್ ಮಹಾನಿರ್ದೇಶಕರು ಈ ಬಗ್ಗೆ ತನಖೆ ನಡೆಸಿ ತಪ್ಪಿತಸ್ಥ ಪೆÇಲೀಸರ ವಿರುದ್ಧ ಕ್ರಮ ಜರುಗಿಸದೇ ಇದ್ದರೆ ಧರ್ಮಾಂಧತೆಯಲ್ಲಿ ಮುಳಗಿ ಇಲಾಖಾ ಪಾವಿತ್ರ್ಯತೆ ಹಾಳು ಮಾಡುವುದರಲ್ಲಿ ಸಂದೇಹವಿಲ್ಲ ಅಲ್ಲವೆ?.