ಕೋವಿಡ್ ಹಗರಣದ ತನಿಖಾ ವರದಿ ಕ್ಯಾಬಿನೆಟ್‌ ನಲ್ಲಿ ಚರ್ಚಿಸಿ ತೀರ್ಮಾನ -ಸಿಎಂ

ಮೈಸೂರು: ಕೋವಿಡ್ ಹಗರಣದ ತನಿಖಾ ವರದಿಯನ್ನು ಬುಧವಾರ ಸಚಿವ ಸಂಪುಟದ

ಮುಂದೆ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ  ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,

ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಹೇಳುತ್ತೇನೆ ಎಂದು ತಿಳಿಸಿದರು.

ವರದಿಯಲ್ಲಿ ಏನಿದೆ ಎಂಬುದನ್ನ ನಾನು ನೋಡಿಲ್ಲ,ಎಷ್ಟು ಪ್ರಮಾಣದ ಭ್ರಷ್ಟಾಚಾರ ಆಗಿದೆ ಎಂಬುದು ಇನ್ನು ಗಮನಕ್ಕೆ ಬಂದಿಲ್ಲ,

ನನ್ನ ಗಮನಕ್ಕೆ ಬರದೆ ಡಿ.ಸುಧಾಕರ್ ಗೆ ಈ ಬಗ್ಗೆ ಯಾರು ಮಾಹಿತಿ ಕೊಟ್ಟರು ಎಂದು ಪ್ರಶ್ನಿಸಿದ ಮುಖ್ಯ ಮಂತ್ರಿಗಳು, ಕುಂಬಳಕಾಯಿ ಕಳ್ಳ ಅಂದ್ರೆ ಆತ ಯಾಕೆ ಹೆಗಲು ಮುಟ್ಟಿ ನೋಡಿ ಕೊಳ್ಳಬೇಕು ಎಂದು ಕೇಳಿದರು.

ಅವರಿಗೆ ಇದು ಸುಳ್ಳು ವರದಿ ಎಂದು ಹೇಗೆ ಗೊತ್ತಾಗುತ್ತೆ ಎಂದ ಸಿಎಂ, ಸುಧಾಕರ್ ತಪ್ಪು ಮಾಡಿರುವುದು ಆತನಿಗೆ ಮಾನಸಿಕವಾಗಿ ಗೊತ್ತಿದೆ, ಹಾಗಾಗಿ ಆ ರೀತಿ ಮಾತನಾಡುತ್ತಿದ್ದಾನೆ ಎಂದು ಟಾಂಗ್ ನೀಡಿದರು.

ಮುಡಾ ಮಾಜಿ ಆಯುಕ್ತ ದಿನೇಶ್ ಅಮಾನತು ವಿಚಾರ ನನಗೆ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ‌ ಎಂದು ಇದೇ‌ ವೇಳೆ ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2009ರ ಹಿಂದಿನ ಬಡವಾಣೆಗೆ 50:50 ಅನ್ವಯ ಆಗುವುದಿಲ್ಲ ಎಂಬ ಉಲ್ಲೇಖದ ಬಗ್ಗೆ ನನಗೆ ಮಾಹಿತಿ ಇಲ್ಲ, ಮೊದಲು ಆದೇಶ ನೋಡುತ್ತೇನೆ ಎಂದರು.

ಮಂಗಳವಾರ ತಾಯಿ ಚಾಮುಂಡೇಶ್ವರಿ ದರ್ಶನ ಮಾಡಿದ್ದೀರ ಏನಾದರೂ ವಿಶೇಷವೆ ಎಂಬ ಪ್ರಶ್ನೆಗೆ,ಬೆಟ್ಟಕ್ಕೆ ಹೋದ ಮೇಲೆ ಚಾಮುಂಡಿ ದೇವಿಯ ದರ್ಶನ ಮಾಡಬೇಕು, ಇದರಲ್ಲಿ ಏನು ವಿಶೇಷ ಎಂದು ಸಭೆಗೆ ಹೋಗುತ್ತಿದ್ದೇನೆ ಹಾಗಾಗಿ ದರ್ಶನ ಮಾಡಿದ್ದೇನೆ‌ ಅಷ್ಟೇ ಎಂದು ಹೇಳಿದರು.

ನನಗೆ ಯಾವ ಟೆಂಕ್ಷನ್ ಇಲ್ಲಾ,ಆತಂಕಾನೂ ಇಲ್ಲ,ನನ್ನ ನೋಡಿದರೆ ಟೆಂಕ್ಷನ್ ಇರೋ ರೀತಿ ಕಾಣುತ್ತೀನಾ ಎಂದು ಮಾಧ್ಯಮದವರಿಗೆ ಪ್ರಶ್ನೆ ಹಾಕಿ,ನಾನು ಯಾವಾಗಲೂ ಹೀಗೆ ಇರುತ್ತೇನೆ, ಇವತ್ತು ಏನು ಸ್ಪೆಷಲ್ ಇಲ್ಲ ಎಂದು ಹೇಳಿದರು.

ಬಿಜೆಪಿಯವರು ಹೇಳಬಾರದಷ್ಟು ಸುಳ್ಳನ್ನ ನನ್ನ ಮೇಲೆ ಹೇಳಿದ್ದಾರೆ.

ಹೀಗಾಗಿ ನಾನು ಟೆಂಕ್ಷನ್ ನಲ್ಲಿದ್ದೇನೆ ಎಂದು ಹೇಳುತ್ತಿದ್ದಾರೆ ಅಷ್ಟೇ ಎಂದು ಮುಕ್ಯಮಂತ್ರಿಗಳು ತಿಳಿಸಿದರು.

ಸಿದ್ದರಾಮಯ್ಯ ಅನುಮತಿ ಕೊಟ್ರೆ ಸಿಎಂ ಆಗುತ್ತೇನೆ ಎಂಬ ದೇಶಪಾಂಡೆ ಹೇಳಿಕೆಗೆ  ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಎಂ ಮಾಡುವುದು ಶಾಸಕರು ಹಾಗೂ ಹೈ ಕಮಾಂಡ್. ಅವರೇ ಅದನ್ನ ತೀರ್ಮಾನ ಮಾಡುತ್ತಾರೆ,ನಾನು ಹೇಗೆ ಮಾಡಲಿ ಎಂದು ಹೇಳಿದರು.