ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಲಂಚದ ಹಣ ಪಡೆಯುತ್ತಿದ್ದಾಗ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ ಪೆಕ್ಟರಗಳಿಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ ಪೆಕ್ಟರ್ ಗಳಾದ ಅವಿನಾಶ್, ರವಿಕುಮಾರ್ ಚಾಮರಾಜನಗರ ಭ್ರಷ್ಟಾಚಾರ ನಿಗ್ರಹ ದಳದವರ ಕಾರ್ಯಾಚರಣೆಗೆ ಸಿಕ್ಕಿಬಿದ್ದಿದ್ದಾರೆ.
ನಾಗವಳ್ಳಿ ಗ್ರಾಮದ ನಿವಾಸಿಯೊಬ್ಬರು ಆಟೊಪಾರ್ಟ್ಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಸದರಿ ಅಂಗಡಿಗೆ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ ಪೆಕ್ಟರ್ ಅವಿನಾಶ್ ಜಿಎಸ್ಟಿ ಕಟ್ಟದೆ ಇರೊ ಬಗ್ಗೆ ದಂಡ ಕಟ್ಟುವಂತೆ ನೋಟಿಸ್ ನೀಡಿದ್ದು. ಸದರಿ ವ್ಯಕ್ತಿ ಡಿ. 2ರಂದು ಕಚೇರಿಗೆ ಹೋದಾಗ ಅವಿನಾಶ್ ನೊಟಿಸ್ ಕ್ಲೋಸ್ ಮಾಡಲು ಹಾಗೂ ಜಿಎಸ್ಟಿ ನೊಂದಣಿ ಮಾಡಿಸದೇ ಇರಲು ಹತ್ತು ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟು ಏಳು ಸಾವಿರ ರೂಪಾಯಿ ಶನಿವಾರ ನೀಡಬೇಕಾಗಿತ್ತು.
ಅದರಂತೆ ದೂರು ಸ್ವೀಕರಿಸಿದ ಎಸಿಬಿ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಆರೋಪಿಗಳ ಜೊತೆ ಹಣವನ್ನ ವಶಪಡಿಸಿಕೊಂಡಿದ್ದಾರೆ.
ಡಿವೈಸ್ಪಿ ತಿಪ್ಪಣ್ಣ, ಇನ್ಸ್ ಪೆಕ್ಟರ್ ಕಿರಣ್ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.