ಕೋವಿಡ್ ಬಂದ ನಂತರ ಸಿದ್ದರಾಮಯ್ಯ ಏನೋನೋ ಮಾತನಾಡುತ್ತಿದ್ದಾರೆ – ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಕೋವಿಡ್ ಬಂದ ಮೇಲೆ ತಾವು ಏನು ಮಾತನಾಡುತ್ತಿದ್ದೇನೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದರು.

ಮೈಸೂರಲ್ಲಿ ಸಚಿವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯನವÀರಿಗೆ ತಾಲಿಬಾನ್ ಗೊತ್ತಿಲ್ಲ, ಬಿಜೆಪಿ ಗೊತ್ತಿಲ್ಲ. ಯಾವುದಕ್ಕೂ ಯಾವ ಸಂಬಂಧವೂ ಇಲ್ಲದೇ ಏನೇನೋ ಮಾತನಾಡುತ್ತಿದ್ದಾರೆಂದರು.

ಆರ್.ಎಸ್.ಎಸ್ ಬಗ್ಗೆ ತಿಳಿಯಬೇಕಾದರೆ ಯಾವುದಾದರೂ ಆರ್.ಎಸ್.ಎಸ್ ಶಾಖೆಗೆ ಬರಲಿ. ಅವರು ಶಾಖೆಗೆ ಬರುವುದಾದರೆ ನಾವೇ ಅವರನ್ನು ಖುದ್ದಾಗಿ ಒಂದು ಶಾಖೆಗೆ ಕರೆದುಕೊಂಡು ಹೋಗುತ್ತೇವೆ. ಕೋವಿಡ್ ಆದ ನಂತರ ತಾನೇನು ಮಾತನಾಡುತ್ತಿದ್ದೇನೆ. ಏನು ಸಂದೇಶ ಕೊಡುತ್ತಿದ್ದೇನೆ ಎಂಬುದರ ಮಾಹಿತಿಯೇ ಇಲ್ಲ. ಅವರಿಗೆ ಮಾನಸಿಕವಾಗಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಚಾಮರಾಜನಗರಕ್ಕೆ ಮುಖ್ಯಮಂತ್ರಿಗಳು ಬಂದೇ ಬರುತ್ತಾರೆ. ಅ. 6ರ ಸಾಯಂಕಾಲ ಮುಖ್ಯ ಮಂತ್ರಿಗಳು ಮೈಸೂರಿಗೆ ಬರುತ್ತಾರೆ. ರಾಷ್ಟ್ರಪತಿಗಳು 11.15ಕ್ಕೆ ಮೈಸೂರಿಗೆ ಬಂದು ಮೈಸೂರಿನಿಂದ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗುತ್ತಾರೆ. ಬಿಳಿಗಿರಿ ರಂಗನಬೆಟ್ಟ ಮುಗಿಸಿ ಚಾಮರಾಜನಗರಕ್ಕೆ ಹೋಗಿ 4.30ಕ್ಕೆ ಮೈಸೂರು ಏರ್ ಪೆÇೀರ್ಟ್ ಗೆ ಬರುತ್ತಾರೆ. ಏರ್ ಪೆÇೀರ್ಟ್‍ನಿಂದ ಶೃಂಗೇರಿಗೆ ಪ್ರಯಾಣಿಸುತ್ತಾರೆ. ಮುಖ್ಯಮಂತ್ರಿಗಳು ದಸರಾ ಉದ್ಘಾಟನೆಯಲ್ಲಿ ಭಾಗವಹಿಸಿ ಏರ್ ಪೆÇೀರ್ಟ್ ನಲ್ಲಿ ಅವರನ್ನು ಸ್ವಾಗತಿಸುತ್ತಾರೆ. ಚಾಮರಾಜನಗರಕ್ಕೆ 3.30ರಿಂದ 4.30ರವರೆಗೆ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುತ್ತಾರೆ ಎಂದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜವಂಶಸ್ಥರಿಗೆ ನೀಡುವ ರಾಜಧನ ಪ್ರತಿವರ್ಷ ಎಷ್ಟುಕೊಡುತ್ತೇವೆಯೋ ಅಷ್ಟೇ ಕೋಡುತ್ತೇವೆ. ನಿನ್ನೆ ಮುಖ್ಯಮಂತ್ರಿಗಳು ದಸರಾಕ್ಕೆ 6 ಕೋಟಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ರಾಜಧನ ಇರಬಹುದು, ಬೇರೆ ಬೇರೆ ಇರಬಹುದು ಚಾಮರಾಜನಗರಕ್ಕೆ ಮತ್ತು ಮಂಡ್ಯ ಎಲ್ಲವನ್ನೂ ತೀರ್ಮಾನಿಸಲಾಗುವುದು ಎಂದು ಹೇಳಿದರು.