ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಪಾನಮತ್ತ ವ್ಯಕ್ತಿಯೊಬ್ಬ ಮತಚಲಾಯಿಸಿ ಮತಗಟ್ಟೆಯಿಂದ ಹೊರ ಬಂದು ಜಿಲ್ಲಾಧಿಕಾರಿಯವರ ವಾಹನದ ಬಳಿ ಮಲಗಿ ರಂಪಾಟ ನಡೆಸಿದ ಘಟನೆ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆಯಿತು.
ಯಳಂದೂರು ತಾಲೂಕಿನಲ್ಲಿ ಭಾನುವಾರ ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಜೆ ಮತದಾನ ನಡೆಯುತ್ತಿದೆ. ಕೆಸ್ತೂರು ಗ್ರಾಮದಲ್ಲಿ ಪಾನಮತ್ತನೊಬ್ಬ ಮತಗಟ್ಟೆಗೆ ತೆರಳಿ, ಮತ ಚಲಾಯಿಸಿ ಮತಗಟ್ಟೆ ಕೇಂದ್ರದಿಂದ ಹೊರ ಬಂದು ರಸ್ತೆಯಲ್ಲಿ ರಂಪಾಟ ನಡೆಸುತ್ತಿದ್ದನು.
ಅದೇ ವೇಳೆಗೆ ಅಲ್ಲಿಗೆ ಆಗಮಿಸಿದ ಜಿಲ್ಲಾಧಿಕಾರಿ ಅವರ ವಾಹನದ ಮುಂದೆ ಮಲಗಿ ಮತ ಚಲಾಯಿಸಬೇಕು ಎಂದು ರಂಪಾಟ ನಡೆಸಿದನು.
ಕೂಡಲೇ ಪೆÇಲೀಸರು ಆಗಮಿಸಿ ಪಾನಮತ್ತನನ್ನು ಎಳೆದು ಮನೆಯೊಂದರ ಪಕ್ಕದಲ್ಲಿ ಮಲಗಿಸಿದರು.
ಇಷ್ಟಕ್ಕೆ ಸುಮ್ಮನಾಗದ ಪಾನಮತ್ತ ವ್ಯಕ್ತಿ ರಂಪಾಟ ಹೆಚ್ಚು ಮಾಡಲು ಆರಂಭಿಸಿದನು. ಕುಡುಕನ ರಂಪಾಟವನ್ನು ಕಂಡು ಅಲ್ಲಿಗೆ ಆಗಮಿಸಿದ ಗ್ರಾಮಸ್ಥರು ಪಾನಮತ್ತ ವ್ಯಕ್ತಿಯನ್ನು ಹೊತ್ತೊಯ್ದರು.
ಜಿಲ್ಲಾಧಿಕಾರಿಯವರನ್ನ ಮಾಧ್ಯಮದವರು, ಕುಡಿದು ಮತ ಚಲಾವಣೆ ಮಾಡಲು ಅವಕಾಶವಿದೆಯೇ ಎಂದು ಕೇಳಿದರೆ, ಅವರು ಕುಡಿದಿದ್ದರಾ ಎಂದು ಮಾಧ್ಯಮದವರನ್ನೆ ಪ್ರಶ್ನೆ ಕೇಳಿ ಹೊರಟು ಹೋದರು.
ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದ್ದರು ಈ ವ್ಯಕ್ತಿ ಮದ್ಯವನ್ನು ಎಲ್ಲಿ ಖರೀದಿಸಿ ತಂದು ಮದ್ಯಪಾನ ಮಾಡಿ ಮತದಾನಕ್ಕೆ ಬಂದಿದ್ದ ಎಂಬುದೇ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ ಆಗಿದೆ.