ಹಾಸನ: ನಗರದ ಅದಿದೇವಿ ಹಾಸನಾಂಬೆ ದರ್ಶನೋತ್ಸವದ ಸಿದ್ದತೆಗಳನ್ನು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಸೋಮವಾರ ಪರಿಶೀಲಿಸಿ ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆ ನೀಡಿದರು.
ದೇವಾಲಯದ ಆವರಣ ಮತ್ತು ಆಯ್ದ ಸ್ಥಳಗಳಲ್ಲಿ ಎಲ್.ಇ.ಡಿ ವಾಲ್‍ಅಳಡಿಕೆ, ಬ್ಯಾರಿಕೇಡಿಂಗ್ ನಿರ್ಮಾಣ, ಲೈಟ್ ಗಳ ಅಳವಡಿಕೆ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿ ಅರ್. ಗಿರೀಶ್ ಯಾವುದೇ ಲೋಪಗಳಿಲ್ಲದಂತೆ ಸಿದ್ದತೆ ಕೈ ಗೊಳ್ಳುವಂತೆ ಸೂಚನೆ ನೀಡಿದರು.
ಈ ಬಾರಿ ಕೋವಿಡ್-19 ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರಿಗೆ ದೇವಾಲಯದ ಒಳಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಆದರೆ ದೇವಾಲಯದ ಅವರಣ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ಎಲ್.ಇ.ಡಿ ಪರದೆ ಅಳವಡಿಸಿ 12 ದಿನಗಳ ಕಾಲವೂ ನೇರ ಪ್ರಸಾರ ಮಾಡಲಾಗುವುದು ಮತ್ತು ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕವೂ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ಅಲ್ಲಿಯೇ ವೀಕ್ಷಣೆ ಮಾಡ ಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಹಾಗೂ ಕಡೆಯ ದಿನ ಕೇವಲ ಜನಪ್ರತಿನಿಧಿಗಳು, ವಿಶೇಷ ಆಹ್ವಾನಿತರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿಗೆ ಮಾತ್ರ ಅವಕಾಶ ಇರಲಿದೆ ಎಂದು ಜಿಲ್ಲಾಧಿಕಾರಿ ಅರ್. ಗಿರೀಶ್ ಹೇಳಿದರು.
ಇದೊಂದು ವಿಭಿನ್ನ ಸಂದರ್ಭ ಕೊರೊನ ಸೋಂಕಿನ ಬಗ್ಗೆ ಎಚ್ವರ ತಪ್ಪಿದರೆ ಮತ್ತೆ ಎರಡನೆ ಹಂತದಲ್ಲಿ ಸೋಂಕು ವ್ಯಾಪಿಸುವ ಅಪಾಯ ಇದೆ ಅದಕ್ಕಾಗಿ ಜಿಲ್ಲಾಡಳಿತ ಮುಂಜಾಗ್ರತೆವಹಿಸುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಅವರು ಮಾತನಾಡಿ ಜಿಲ್ಲಾಡಳಿತದ ನಿರ್ಧಾರ ಪಾಲನೆಯಾಗಲಿದೆ. ಸಾರ್ವಜನಿಕರು ಕೇವಲ ಎಲ್.ಇ.ಡಿ ಪರದೆ ಅಥವಾ ಆನ್ ಲೈನ್ ಮೂಲಕ ವೀಕ್ಷಣೆ ಮಾಡಿ ಸಹಕೆಇಸಿ, ಕೊವಿಡ್- 19 ನಿಯಂತ್ರಣಕ್ಕೆ ಕೈ ಜೊಡಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಅಪರ ಪೆÇಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ, ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್, ಡಿ.ವೈ.ಎಸ್.ಪಿ ಪುಟ್ಟಸ್ವಾಮಿಗೌಡ, ಲೋಕೊಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್, ನಗರಸಭೆ ಆಯುಕ್ತ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ತಹಶೀಲ್ದಾರ್ ಶಿವಶಂಕರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.