ಮೈಸೂರು: ಕರ್ನಾಟಕದ ಕೋಟ್ಯಾಂತ ರೂ. ಹಣವನ್ನು ಆಂಧ್ರ ಪ್ರದೇಶಕ್ಕೆ ಹರಿಸಿದ ಖುಣಕ್ಕಾಗಿ ರೋಹಿಣಿ ಸಿಂಧೂರಿ ಅವರಿಗೆ ಮೈಸೂರು ಡಿಸಿ ಪೆÇೀಸ್ಟ್ ನ್ನು ಗಿಫ್ಟ್ ಆಗಿ ನೀಡಲಾಗಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದರು.
ನಗರದಲ್ಲಿ ಗುರುವಾರ ಸಾ.ರಾ. ಮಹೇಶ್ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ತಿರುಪತಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ಕರ್ನಾಟಕ ಯಾತ್ರಿ ಭವನಕ್ಕಾಗಿ ರಾಜ್ಯದ 200 ಕೋಟಿ ರೂ. ಹಣವನ್ನು ಕೊಟ್ಟ ಖುಣ ತೀರಿಸಲು ರೋಹಿಣಿ ಸಿಂಧೂರಿ ಅವರಿಗೆ ಮೈಸೂರು ಡಿಸಿ ಪೆÇೀಸ್ಟ್ ನ್ನು ಗಿಫ್ಟ್ ಆಗಿ ನೀಡಲಾಗಿದೆ ಎಂದರು.
ಜಾಗ ನಮ್ಮದು, ಹಣ ನಮ್ಮದು. ಆದರೆ ಸಂಕೀರ್ಣದ ಕಂಟ್ರಾಕ್ಟರ್ ಮತ್ತು ವಿನ್ಯಾಸಗಾರರು ಮಾತ್ರ ಆಂಧ್ರ ಪ್ರದೇಶದವರು. ಇದರ ನಿರ್ಮಾಣ ಮಾಡಲು ನಮ್ಮ ಲೋಕೋಪಯೋಗಿ ಇಲಾಖೆಯೇ ಇರಲ್ಲಿಲ್ಲವೇ ಎಂದವರು ಪ್ರಶ್ನಿಸಿದರು.
ಇನ್ನು ಮೆಸರ್ಸ್ ಗಾಯತ್ರಿ ಅಂಡ್ ನಮಿತ್ ಆರ್ಕಿಟೆಕ್ಟ್ ಕಂಪನಿಗೆ 10 ಕೋಟಿ ರೂ. ಕೊಟ್ಟು ವಿನ್ಯಾಸದ ಹೊಣೆ ನೀಡಲಾಗಿದೆ. ನಮ್ಮ ಕರ್ನಾಟಕದ ವಿನ್ಯಾಸಗಾರರೇ ಇರಲಿಲ್ಲವೇ ಎಂದು ಪ್ರಶ್ನಿಸಿರುವ ಸಾ.ರಾ.ಮಹೇಶ್, ಆಂಧ್ರ ಮೂಲದ ಡಿಸೈನ್ ಕಂಪನಿಗೆ ವಿನ್ಯಾಸದ ಉಸ್ತುವಾರಿ ನೀಡಿದ್ದರ ಹಿಂದಿನ ಉದ್ದೇಶವೇನು ಎಂದಿದ್ದಾರೆ.