ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಾಲ್ವರ ಬಂಧನ

ಮೈಸೂರು, ಸೆ. 30- ನಕಲಿ ರೈಸ್ ಪುಲ್ಲಿಂಗ್ ಸಾಮಗ್ರಿಗಳನ್ನು ತೋರಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ನಾಲ್ವರನ್ನು ನಗರದ ದೇವರಾಜ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಚಂದ್ರಮೋಹನ್ (57), ಕೇರಳದ ಟಿ.ವಿ.ಇಬ್ರಾಹಿಂ (50), ಬೆಂಗಳೂರಿನ ಕೆ.ಆರ್. ಗಿರಿನಾಥನ್ (49), ಎಂ.ಗೋಪಿ (40) ಬಂಧಿತ ಆರೋಪಿಗಳು.
ನಗರದ ಧನ್ವಂತ್ರಿ ರಸ್ತೆಯ ಗಾಯತ್ರಿ ಭವನ್ ಹೋಟೆಲ್ ನ ಕೊಠಡಿ ಸಂಖ್ಯೆ 101 ಮತ್ತು 102ರ ಮೇಲೆ ದೇವರಾಜ ಠಾಣೆ ಪೆÇಲೀಸರು ದಾಳಿ ನಡೆಸಿ ನಕಲಿ ರೈಸ್ ಪುಲ್ಲಿಂಗ್ ಸಾಮಗ್ರಿಗಳನ್ನು ತೋರಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ 4 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ ಪೊಲೀಸರು ವಿವಿಧ ಸಾಮಾಗ್ರಿಗಳನ್ನು ವಶಪಪಡಿಸಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ದೇವರಾಜ ಠಾಣೆ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸದರಿ ಆರೋಪಿಗಳಿಂದ ಮೋಸ ಹೋಗಿರುವ ಸಾರ್ವಜನಿಕರು ಯಾರಾದರೂ ಇದ್ದಲ್ಲಿ ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ಮೊಬೈಲ್ ನಂ. 9480802231, ಸ್ಥಿರ ದೂರವಾಣಿ ಸಂಖ್ಯೆ 0821-2418306ಕ್ಕೆ ಸಂಪರ್ಕಿಸಲು ಕೋರಿದೆ.