ಬೆಂಗಳೂರು: ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿ ಸಂಭವಿಸಿದ ಬೆಂಕಿ ಅವಘಡ ಪ್ರಕರಣ ಸಂಬಂಧ ಮೂರು ಆಯಾಮಗಳಲ್ಲಿ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಳ ಜೊತೆ ಮಾತನಾಡಿದ ಅವರು, ಘಟನೆ ಕುರಿತು ಮೂರು ಆಯಾಮಗಳಲ್ಲಿ ತನಿಖೆಗೆ ಸೂಚಿಸಲಾಗಿದೆ, ಆಂತರಿಕ ತನಿಖೆ ನಡೆಸುವಂತೆಯೂ ಬಿಬಿಎಂಪಿ ತಾಂತ್ರಿಕ ತಂಡಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಗೆ ಹಾಗೂ ಇಂದನ ಇಲಾಖೆ ಅಧಿಕಾರಿಗಳಿಗೂ ತನಿಖೆಗೆ ಸೂಚನೆ ನೀಡಿದ್ದೇವೆ. ಮೂರು ಇಲಾಖೆಗಳಿಂದಲೂ ತನಿಖಾ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ತನಖೆ ನಂತರ ಸತ್ಯ ಗೊತ್ತಾಗಲಿದೆ.ಈ ಸಂಬಂಧ ಸದ್ಯ ಯಾರ ಮೇಲೂ ಆರೋಪ ಮಾಡಲು ಆಗುವುದಿಲ್ಲ ಎಂದು ಡಿ ಕೆ ಶಿ ತಿಳಿಸಿದರು.