ಮೈಸೂರು: ದಿವಂಗತ ಆರ್. ಧ್ರುವನಾರಾಯಣ್ ರವರ ಪತ್ನಿ ವೀಣಾ ಅವರು ವಿಧಿವಶರಾಗಿದ್ದಾರೆ.
ಮಾರ್ಚ್ 11ರಂದು ಕಾಂಗ್ರೆಸ್ ಕಾರ್ಯಧ್ಯಕ್ಷ ಆರ್. ಧ್ರುವ ನಾರಾಯಣ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು.
ದೃವನಾರಾಯಣ ಪತ್ನಿ ವೀಣಾ ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಪತಿ ಸಾವಿನ ನಂತರ ಅವರು ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದರು.
ಇನ್ನೂ ಪತಿಯ ಸಾವಿನ ದುಃಖದಿಂದ ವೀಣಾ ಅವರು ಹೊರಬಂದಿರಲಿಲ್ಲ,ಇದೀಗ
ಶುಕ್ರವಾರ ಬೆಳಿಗ್ಗೆ ಅವರೂ ಕೂಡಾ ಕೊನೆಯುಸಿರೆಳೆದಿದ್ದಾರೆ.
ಸಜ್ಜನ ನಾಯಕ, ದೂರದರ್ಶಿತ್ವ ಹೊಂದಿದ್ದ ಅಜಾತಶತ್ರು ಧ್ರುವನಾರಾಯಣ ಅವರು ಮಾರ್ಚ್ 11ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.
ಅದಾಗಿ ತಿಂಗಳ ಒಳಗೇ ಆ ಮನೆಯಲ್ಲಿ ಮತ್ತೊಂದು ಮೃತ್ಯು ಸಂಭವಿಸಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ.
ದೃವನಾರಾಯಣ ಅವರ ಅಕಾಲಿಕ ಸಾವು ಕುಟುಂಬವನ್ನು ಕಂಗೆಡಿಸಿತ್ತು.ಇದೀಗ ಅವರ ಪತ್ನಿ ಕೂಡಾ ಇಹಲೋಕ ಯಾತ್ರೆ ಮುಗಿಸಿದ್ದಾರೆ.ಇವರ ಇಬ್ಬರು ಮಕ್ಕಳಾದ ದರ್ಶನ್, ಧೀರನ್ ಅವರಿಗೆ ಶಾಕ್ ಮೇಲೆ ಶಾಕ್ ಆಗಿದೆ.
ಮೊದಲೇ ಅನಾರೋಗ್ಯ ಪೀಡಿತರಾಗಿದ್ದ ವೀಣಾ ಅವರು ಪತಿಯ ಸಾವಿನ ಸಂದರ್ಭದಲ್ಲಿ ಬಹಳ ನೋವು ಅನುಭವಿಸಿದ್ದರು.
ಮೈಸೂರಿನಲ್ಲಿರುವ ದೃವನಾರಾಯಣ್ ನಿವಾಸಕ್ಕೆ ನೂರಾರು ಜನ ಅಗಮಿಸಿ ತೀವ್ರ ದಃಖ ವ್ಯಕ್ತಪಡಿಸಿದ್ದಾರೆ.