ಕಾಂಗ್ರೆಸ್ ನವರು ಕೋವಿಡ್ ಇದ್ದಂತೆ – ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ

ಮೈಸೂರು, ಅ. 8- ಕಾಂಗ್ರೆಸ್ ನವರು ಕೋವಿಡ್ ಇದ್ದಂತೆ ಅವರು ಸ್ಯಾನಿಟೈರ್ ಹಾಕಿ ಕೊಂಡು ಮನೆಯಲ್ಲಿ ಕ್ವಾರಂಟೈನ್ ಆಗಿದ್ದರೆ ರೈತರಿಗೆ ಹೆಚ್ಚಿನ ಅನುಕೂಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬ ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದ ಗೌಡ ಅವರು ಹೇಳಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಗುರುವಾರ ಸದಾನಂದ ಗೌಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಎಪಿಎಂಸಿ ಕಾಯ್ದೆ ರೈತರ ಪರವಾಗಿದೆ. ಈ ಬಗ್ಗೆ ಕಾಂಗ್ರೆಸ್ ನವರು ಇಲ್ಲ ಸಲ್ಲದ ಗೊಂದಲವನ್ನು ರೈತರಲ್ಲಿ ಉಂಟು ಮಾಡುತ್ತಾರೆಂದರು.
ಹಾಗಾಗಿ ಕಾಂಗ್ರೆಸ್ ನವರು ಕೋವಿಡ್ ಇದ್ದಂತೆ ಅವರು ಸ್ಯಾನಿಟೈಸರ್ ಹಾಕಿ ಕೊಂಡು ಮನೆಯಲ್ಲಿ ಕ್ವಾರಂಟೈನ್ ಆಗಿದ್ದರೆ ರೈತರಿಗೆ ಹೆಚ್ಚಿನ ಅನುಕೂಲ ಎಂದು ಸದಾನಂದ ಗೌಡ ಅವರು ಹೇಳಿದರು.
ಈಗ ತಿದ್ದುಪಡಿ ಮಾಡಲಾಗಿರುವ ಕಾಯ್ದೆಯಿಂದ ರೈರಿಗೆ ಯಾವುದೇ ರೀತಿಯಲ್ಲೂ ತೊಂದರೆ ಇಲ್ಲ. ಇದೆಲ್ಲವು ಅವರ ಅನುಕೂಲಕ್ಕಾಗಿ ಮಾಡಲಾಗಿದೆ ಎಂದವರು ತಿಳಿಸಿದರು.
ಒಂದು ವೇಳೆ ಇದರಲ್ಲಿ ರೈತರಿಗೆ ತೊಂದರೆ ಆಗುವ ಅಂಶಗಳಿದ್ದರೆ ಆ ಕುರಿತು ರೈತರೊಂದಿಗೆ ಚರ್ಚಿಸಲು ನಾನು ಸಿದ್ಧ. ಆದರೆ ಆ ರೈತರು ರಾಜಕೀಯ ಹಿನ್ನೆಲೆಯುಳ್ಳವರಾಗಿರಬಾರದು ಎಂದರು.
ಈ ಕಾಯ್ದೆ ತಿದ್ದುಪಡಿಯನ್ನು ಪ್ರಧಾನಿ ಮೋದಿವರು ಮಾಡಿಲ್ಲ ತಜ್ಞರು, ನೀತಿ ಆಯೋಗದೊಂದಿಗೆ ಚರ್ಚಿಸಿ ತಿದ್ದುಪಡಿ ಮಾಡಲಾಗಿದೆ. ಈ ಕುರಿತು ದೇಶದ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ ಸೇರಿದಂತೆ ಬಿಜೆಪಿ ಮುಖಂಡರಿದ್ದರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.