ಯಾದಗಿರಿ: ನಿರಂತರವಾಗಿ ಸೇಡಿನ ರಾಜಕಾರಣ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೇ ಹೇಳಿದರು.
ಈಶ್ವರ ಖಂಡ್ರೇ ಅವರು ಬುಧವಾರ ಇಲ್ಲಿ ಮಾಧ್ಯಮ ಪ್ರತಿನಿಧೀಗಳೊಂದಿಗೆ ಮಾತನಾಡಿದರು.
ವಿರೋಧ ಪಕ್ಷದವರ ಧ್ವನಿ ಅಡಗಿಸಲು ಸಿಬಿಐ ದಾಳಿ ಮಾಡಲಾಗುತ್ತಿದೆ ಎಂದವರು ದೂರಿದರು.
ಉಪ ಚುನಾವಣೆ ಹಿನ್ನಲೆ ಡಿಕೆ ಶಿವಕುಮಾರ್ ಮೇಲೆ ಸಿಬಿಐ ದಾಳಿ ಮಾಡಲಾಗಿದೆ..
ಯಾವಾಗ ಯಾವಾಗ ಉಪ ಚುನಾವಣೆ ಬರ್ತಾವೋ ಅವಾಗ ವಿರೋಧ ಪಕ್ಷದವರ ಮೇಲೆ ದಾಳಿ ಮಾಡಿ ಬೆದರಿಸುವಂತ ಕೆಲಕ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಇಂತಹ ಬೆದರಿಸುವ ತಂತ್ರಕ್ಕೆ ಬಗ್ಗೋದಿಲ್ಲ. ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆಂದರು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ಚುನಾವಣೆ ಆಯೋಗ, ಸಿಬಿಐ, ಇಡಿ ಹಾಗೂ ಐಟಿಯನ್ನ ದುರ್ಬಳಕೆ ಮಾಡುತ್ತಿದ್ದಾರೆಂದರು.
ಕೊರೊನಾ ಕಾಲದಲ್ಲಿ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಖಂಡ್ರೇ ಆರೋಪಿಸಿ ಈ ಬಗ್ಗೆ ತನಿಖೆ ಮಾಡಲಿ ಎಂದರು.