ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಗೆ ಬಹುಪರಾಕ್

ನವದೆಹಲಿ: ಈಶಾನ್ಯ ಭಾಗದ ಮೂರು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಗುರುವಾರ ಮತ ಎಣಿಕೆ ನಡೆದಿದ್ದು, ಬಿಜೆಪಿ ಮತ್ತು ಸ್ಥಳೀಯ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ಮುನ್ನಡೆ ಸಾಧಿಸಿವೆ.

60 ಕ್ಷೇತ್ರಗಳನ್ನು ಹೊಂದಿರುವ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‍ನಲ್ಲಿ  ಕಾಂಗ್ರೆಸ್ ಕಳಪೆ ಸಾಧನೆ ಮಾಡಿದೆ.

ಬಿಜೆಪಿ ಗೆಲುವಿನತ್ತ ಹೆಜ್ಜೆ ಹಾಕಿದೆ.

ಈಗಾಗಲೇ ಈಶಾನ್ಯ ಭಾಗದ ಅಸ್ಸಾಂನಲ್ಲಿ ದಿಗ್ವಿಜಯ ಸಾಧಿಸಿರುವ ಕೇಂದ್ರ ಆಡಳಿತಾ ರೂಢ ಬಿಜೆಪಿ ಈ ಮೂರು ರಾಜ್ಯಗಳ ಪೈಕಿ ನಾಗಾಲ್ಯಾಂಡ್ ಮತ್ತು ತ್ರಿಪುರದಲ್ಲಿ ಅಧಿಕಾರ ಹಿಡಿಯುವುದು ಖಚಿತವಾಗಿದೆ.

ತ್ರಿಪುರದಲ್ಲಿ ಬಿಜೆಪಿ 33 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಅಧಿಕಾರ ಹಿಡಿಯುವುದು ಗ್ಯಾರಂಟಿ.

ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಕೂಟ 15ಕ್ಷೇತ್ರಗಳಲ್ಲಿ, ಸಿಪಿಎಂ 10ರಲ್ಲಿ, ತಿಪ್ರಾ ಪಕ್ಷ 10ರಲ್ಲಿ ಗೆಲುವು ಸಾಧಿಸಿದೆ.

ಹಿಂದಿನ ವರ್ಷದ ಫಲಿತಾಂಶಕ್ಕೆ ಹೊಲಿಕೆ ಮಾಡಿದರೆ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಹಿನ್ನೆಡೆ ಅನುಭವಿಸಿದೆ, ಐಪಿಎಫ್‍ಟಿ ಒಂದರಲ್ಲಿ ಗೆಲುವು ಸಾಧಿಸಿದ್ದು, ಏಳರಲ್ಲಿ ಹಿನ್ನಡೆ ಅನುಭವಿಸಿದೆ.

ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಮಿತ್ರಕೂಟ ಎರಡು ಕ್ಷೇತ್ರಗಳನ್ನು ಕಳೆದುಕೊಂಡಿವೆ. ವೈಯಕ್ತಿಕವಾಗಿ ಕಾಂಗ್ರೆಸ್ ಐದು ಕ್ಷೇತ್ರಗಳಲ್ಲಿ ಗಳಿಕೆ ಕಂಡಿದೆ. ಸಿಪಿಎಂ ಏಳರಲ್ಲಿ, ಹೊಸದಾಗಿ ಸಂಚಲನ ಸೃಷ್ಟಿಸಿದ ತಿಪ್ರಾ 10 ಕ್ಷೇತ್ರಗಳಲ್ಲೂ ಗಳಿಕೆಯಲ್ಲಿದೆ.

ಮೇಘಾಲಯದಲ್ಲಿ ಆಡಳಿತಾರೂಢ ಎನ್‍ಪಿಪಿ 27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಮುಖ್ಯಮಂತ್ರಿ ಸಂಗ್ಮಾ ತಮ್ಮ ಎದುರಾಳಿ ಪಕ್ಷಗಳಿಗಿಂತ ಮುನ್ನೆಡೆ ಸಾಸಿದ್ದಾರೆ. ಮತ್ತೆ ಎನ್‍ಪಿಪಿ ಆಡಳಿತವೇ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.

ಬಿಜೆಪಿ 5, ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಟಿಎಂಸಿ 5ರಲ್ಲಿ, ಯುಡಿಪಿ 6ರಲ್ಲಿ, ಉಳಿದ ಕ್ಷೇತ್ರಗಳಲ್ಲಿ ಪಕ್ಷೇತರರು ಮುನ್ನಡೆಯಲ್ಲಿದ್ದಾರೆ.

ನಾಗಾಲ್ಯಾಂಡ್‍ನಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಎನ್‍ಡಿಪಿಪಿ 22ರಲ್ಲಿ ಮುನ್ನಡೆ ಸಾಧಿಸಿದ್ದು, ಚುನಾವಣಾ ಪೂರ್ವದ ಬಿಜೆಪಿ ಮತ್ತು ಎನ್‍ಡಿಪಿಪಿ ಮಿತ್ರಕೂಟ ಒಟ್ಟು 34 ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿವೆ.

ಕಳೆದ ಚುನಾವಣೆಗಿಂತಲೂ ಎನ್‍ಡಿಪಿಪಿ ಐದು ಕ್ಷೇತ್ರಗಳಲ್ಲಿ ಗಳಿಕೆ ಕಂಡಿದೆ. ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಎನ್‍ಪಿಎಫ್ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಮುನ್ನೆಡೆ ಗಳಿಸಿದ್ದು, 22ರಲ್ಲಿ ಹಿನ್ನಡೆ ಕಂಡಿದೆ.

ನಾಗಲ್ಯಾಂಡ್-60 ಕ್ಷೇತ್ರ:ಬಿಜೆಪಿ-39,ಎನ್ ಪಿ ಎಫ್-3,ಕಾಂಗ್ರೆಸ್-0.

ಮೇಘಾಲಯ-60ಕ್ಷೇತ್ರ:ಎನ್‍ಪಿಪಿ-27,ಬಿಜೆಪಿ-5,ಕಾಂಗ್ರೆಸ್-5,

ತ್ರಿಪುರ-60 ಕ್ಷೇತ್ರ-ಬಿಜೆಪಿ 32,ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಕೂಟ 15, ಸಿಪಿಎಂ 10, ತಿಪ್ರಾ ಪಕ್ಷ 10ರಲ್ಲಿ ಗೆಲುವು ಸಾಧಿಸಿದೆ.