ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆ ಲೋಕಾರ್ಪಣೆ ಮಾಡಿದ ಪ್ರಧಾನಿ

ಮಂಡ್ಯ:  9,000 ಕೋಟಿ ವೆಚ್ಚದ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹಸ್ರಾರು ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಲೋಕಾರ್ಪಣೆ ಮಾಡಿದರು.

ಮಂಡ್ಯದ ಗೆಜ್ಜಲಗೆರೆಯಲ್ಲಿ ಹೈವೆ ಲೋಕಾರ್ಪಣೆ ಮಾಡಿದ ಪ್ರಧಾನಿ  ಕನ್ನಡದಲ್ಲೇ ಭಾಷಣ ಶುರು ಮಾಡಿದರು.

ಕರ್ನಾಟಕದ ಜನತೆಗೆ ನಮಸ್ಕಾರ ಎಂದು ಮಾತು ಪ್ರಾರಂಭಿಸಿ, ಆದಿಚುಂಚನಗಿರಿ ಆಶೀರ್ವಾದ ನನಗೆ, ಕರ್ನಾಟಕದ ಬೇರೆ ಬೇರೆ ಕಡೆ ಜನರ ದರ್ಶನ ಸಿಗುತ್ತದೆ. ಬಿಜೆಪಿಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ‌. ಸಕ್ಕರೆ ನಾಡಿನ ಜನರ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಕೋರಿದರು.

ಡಬಲ್ ಇಂಜಿನ್ ಸರ್ಕಾರದ ನಿರಂತರ ಪ್ರಯತ್ನದಿಂದ ಈ ಯೋಜನೆ ಸಾಕಾರಗೊಂಡಿದೆ. ನಿಮ್ಮ ಋಣವನ್ನು ಬಡ್ಡಿ ಸಮೇತ ತೀರಿಸುವ ಅವಕಾಶ ಸಿಕ್ಕಿದೆ ಎಂದು ಮೋದಿ ಹೇಳಿದರು.

ಬೆಂಗಳೂರು -ಮೈಸೂರು ಹೆದ್ದಾರಿ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ದೇಶದ ರಸ್ತೆಗಳು ಅಭೂತಪೂರ್ವವಾಗಿರಬೇಕು.

ಬೆಂಗಳೂರು -ಮೈಸೂರು ಹೆದ್ದಾರಿ ಪ್ರಯಾಣ ಕಡಿಮೆಯಾಗಿದೆ. ಮೈಸೂರು-ಕುಶಾಲನಗರ ಹೆದ್ದಾರಿಗೂ ಶಂಕು ಸ್ಥಾಪನೆ ಯಾಗಿದೆ‌.

ಭಾರತದಲ್ಲಿ ಮೂಲಭೂತ ಸೌಕರ್ಯಗಳಿವೆ. ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ನವರಂತಹ ಮಹಾ ಪುರುಷರನ್ನು ಈ ಪುಣ್ಯ ಭೂಮಿ ನೀಡಿದೆ.

ಅವರ ತಪ್ಪಸಿನ ಫಲವನ್ನ ಅನುಭವಿಸುತ್ತಿದ್ದೇವೆ ಇಂತಹ ಮಾಹಾ ಪುರುಷರ ಪ್ರೇರಣೆಯಿಂದ ಒಳ್ಳೆಯ ಕಾರ್ಯ ನಡೆಯುತ್ತಿದೆ.

ಬೆಂಗಳೂರು -ಮೈಸೂರು ಕರ್ನಾಟಕದ ಮಹತ್ವದ ನಗರವಾಗಿದೆ. ಈ ಎರಡೂ ನಗರ ಸಂಪರ್ಕದಿಂದ ಬೇರೆ ಬೇರೆ ನಗರದ ಸಂಪರ್ಕ ಪಡೆಯುತ್ತವೆ.

ಈ ಎಕ್ಸ್‌ಪ್ರೆಸ್‌ ವೇ ರಾಮನಗರ ಮಂಡ್ಯ ಮೂಲಕ ಹಾದು ಹೋಗುತ್ತಿದೆ. ಈ ಎರಡೂ ಐತಿಹಾಸಿಕ ಸ್ಥಳವಾಗಿದೆ.

ಈಗ ಆರಂಭವಾಗುವ ಮೈಸೂರು ಕುಶಾಲನಗರ ರಸ್ತೆ ಯೋಜನೆಯಿಂದ ಜನರಿಗೆ ಅನುಕೂಲವಾಗುತ್ತೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮೋದಿ ಜೆಡಿಎಸ್ ಭದ್ರಕೋಟೆಯಾದ ಮಂಡ್ಯದಲ್ಲಿ ಜೆಡಿಎಸ್ ಬಗ್ಗೆ ಚಕಾರ ಎತ್ತದೆ ಹೋದುದು ಚರ್ಚೆಗೆ ಗ್ರಾಸ ಒದಗಿಸಿರುವುದಂತೂ ಸತ್ಯ