ಗನ್ ತೋರಿಸಿ ಕಳವು ಮಾಡುತ್ತಿದ್ದ ಇಬ್ಬರ ಬಂಧನ

ಯಾದಗಿರಿ :ಗನ್ ತೋರಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಯಾದಗಿರಿ ಜಿಲ್ಲಾ ಹುಣಸಗಿ ಪೊಲೀಸರು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತೋಷ ಹಾಗೂ ರಾಘವೇಂದ್ರ ಬಂಧಿತ ಆರೋಪಿಗಳು.

ಯಾದಗಿರಿ ಜಿಲ್ಲೆಯ ಹುಣಸೂರು ಸುತ್ತಮುತ್ತ ಈ  ಕಳ್ಳರು ಗನ್ ತೋರಿಸಿ ಕಳ್ಳತನ ಮಾಡುತ್ತಿದ್ದರು.

ಇದು ಜನರಿಗೆ ತಲೆ ನೋವು ತಂದಿತ್ತು.

ಕಳ್ಳತನ ಮಾಡಿದ ಕುರಿಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಸಂತೋಷ ಹಾಗೂ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 5 ಕುರಿಗಳನ್ನು ರಕ್ಷಿಸಿರುವ ಪೊಲೀಸರು 8 ದ್ವಿಚಕ್ರ ವಾಹನ ಹಾಗೂ ಒಂದು ಸ್ವಿಫ್ಟ್ ಡಿಸೈರ್ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳು ಕಳ್ಳತನಕ್ಕೆ   ಏರ್ ಗನ್, ಲೈಟ್ ವಿತ್ ಬಟನ್ ಚಾಕು, ಕಬ್ಬಿಣದ ಪೈಪ್ ಹಾಗೂ ಖಾರದ ಪುಡಿಯನ್ನು ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.