ದಸರಾ ಆಚರಿಸಿ ಕೊರೊನಾ ಹೆಚ್ಚಾದರೆ ಜನರೇ ಸರ್ಕಾರದ ವಿರುದ್ದ ಕೇಸ್ ದಾಖಲಿದ್ದಾರೆ -ಹೆಚ್.ವಿಶ್ವನಾಥ್

ಮೈಸೂರು: ಮೈಸೂರು ದಸರಾ ಆಚರಿಸಿ ಕೊರೊನಾ ಹೆಚ್ಚಾದರೆ ಸರ್ಕಾರದ ವಿರುದ್ದ ಜನರೇ ಕೇಸ್ ದಾಖಲಿಸಲಿದ್ದಾರೆ ಎಂದು ಎಂಎಲ್ ಸಿ ಹೆಚ್.ವಿಶ್ವನಾಥ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಬುಧವಾರ ವಿಶ್ವನಾಥ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸರಳಾ ಮತ್ತು ಸಾಂಪ್ರದಾಯಿಕ ದಸರಾ ಆಚರಣೆಗೆ ಮುಂದಾಗಿರುವ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಎಚ್ಚರಿಕೆ ನೀಡಿದರು.
ದಸರಾ ಹಿನ್ನೆಲೆ ಮೈಸೂರು ನಗರದಲ್ಲಿ ದೀಪಾಲಂಕಾರ ಮಾಡಿದರೆ ಅದನ್ನು ನೋಡಲು ಜನ ಬರುತ್ತಾರೆ ಇದರಿಂದ ಕೊರೊನಾ ಹರಡುವುದಿಲ್ಲವೆ ಎಂದು ವಿಶ್ವನಾಥ್ ಪ್ರಶ್ನಿಸಿದರು.
ರಸ್ತೆಗಳಿಗೆ ದೀಪಾಲಂಕಾರ ಮಾಡಿ ಜನರನ್ನು ನೋಡಲು ಬರಬೇಡಿ ಎನ್ನಲಾಗುತ್ತಾ ಎಂದರು ವಿಶ್ವನಾಥ್.
ದಸರಾ ಅರಮನೆಗೆ ಸೀಮಿತವಾಗಿ ನಡೆಯುವುದು ಒಳಿತು ಎಂದು ಹೇಳಿದ ವಿಶ್ವನಾಥ್ ಇಲ್ಲವಾದರೆ ದಸರಾ ಪರಂಪರೆಗೂ ಕಳಂಕ ಬರುತ್ತದೆಂದರು.
ಕೊರೊನಾ ಸೋಂಕಿನಿಂದ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ನಿವಾಸಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಬುಧವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.