ಬೆಂಗಳೂರು: ಡ್ರಗ್ಸ್ ದಂಧೆಯ ತನಿಖೆ ದಾರಿ ತಪ್ಪಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಹೆಚ್.ಡಿಕೆ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಡ್ರಗ್ಸ್ ದಂಧೆಯ ತನಿಖೆ ಹಂತದಲ್ಲಿ ವಿಷಯಾಂತರವಾಗಬಾರದು ಮತ್ತು ದಾರಿ ತಪ್ಪಬಾರದು ಎಂದು ಹೆಚ್.ಡಿಕೆ ಹೇಳಿದರು.
ಶಾಸಕ ಜಮೀರ್ ಅಹಮ್ಮದ್ ಮಾಡಿರುವ ಆರೋಪಕ್ಕೆ ಉತ್ತರ ಕೊಡಬೇಕಾಗಿಲ್ಲ ಎಂದ ಹೆಚ್.ಡಿಕೆ ಜೆಡಿಎಸ್ ಶಾಸಕರು ಮತ್ತು ಮುಖಂಡರು ಶ್ರೀಲಂಕಾಕ್ಕೆ ಹೋಗಿದ್ದು ನಿಜ. ಪಕ್ಷದ ವಿಚಾರವಾಗಿ ಚರ್ಚಿಸಲು ಹೋಗಿದ್ದೆವು. ಅದಕ್ಕೂ ಇದಕ್ಕೂ ಸಂಬಂಧವಿಲ್ಲವೆಂದರು.
ಕ್ಯಾಸಿನೋ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಕ್ಯಾಸಿನೋ ವಿಚಾರವೇ ಬೇರೆ ಎಂದು ಕುಮಾರಸ್ವಾಮಿ ಹೇಳಿದರು.