ಶ್ರೀರಂಗಪಟ್ಟಣ: ಮಂಡ್ಯದ ನಾಗಮಂಗಲ ತಾಲೂಕಿನಲ್ಲಿ ಗಣಪತಿ ವಿಸರ್ಜನೆ ವೇಳೆ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಹಿಂದು ಸಂಘಟನೆಯವರು ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗಣಪತಿ ಸೇವಾ ಸಮಿತಿಯವರು ಹಾಗೂ ಹಿಂದೂ ಕಾರ್ಯಕರ್ತರು ಸಾರ್ವಜನಿಕರು ಒಗ್ಗೂಡಿ ಮಾನವ ಸರಪಳಿ ನಿರ್ಮಿಸಿ ಸರ್ಕಾರ ಹಾಗೂ ದುರುಳರ ವಿರುದ್ಧ ದಿಕ್ಕಾರ ಕೂಗಿದರು.
ಇದೇ ರೀತಿ ಹಿಂದುಗಳ ಮೇಲೆ ಅಟ್ಟಹಾಸ ಮೆರೆದರೆ ಉಗ್ರ ಹೋರಾಟಕ್ಕೆ ನಾವು ಸಿದ್ಧವಾಗಬೇಕಾಗುತ್ತದೆ ಎಂದು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ನಾನು ಬ್ರಾಹ್ಮಣ, ನಾನು ಲಿಂಗಾಯಿತ, ನಾನು ಶೂದ್ರ, ನಾನು ವೈಶ್ಯ ಎಂದು ಕಿತ್ತಾಡಿಕೊಂಡರೆ ನಮ್ಮ ಹಿಂದೂ ಧರ್ಮಕ್ಕೆ ಉಳಿಗಾಲವಿಲ್ಲ ಆದ್ದರಿಂದ ನಮ್ಮ ಮನೆಯ ನಾಲ್ಕು ಗೋಡೆ ಮಧ್ಯ ಮಾತ್ರ ನಮ್ಮ ಜಾತಿ ಸೀಮಿತವಾಗಿರಬೇಕು ಮನೆಯಿಂದ ಹೊರಗೆ ಬಂದರೆ ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಮನೋಭಾವನೆ ಬೆಳೆಸಿಕೊಂಡರೆ ಮಾತ್ರ ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಹೇಳಿದರು.
ಗಲಭೆ ವೇಳೆ ದುರುಳರು ಹಿಂದೂ ಧಾರ್ಮಿಕ ಮನೋಭಾವನೆಗಳ ಮೇಲೆ ಧಕ್ಕೆ ಮಾಡಿದ್ದಾರೆ, ಕಲ್ಲು ಗುಂಡುಗಳು ಮಚ್ಚು ತಲ್ವಾರ್ ಗಳಿಂದ ಹಲ್ಲೆ ನಡೆಸಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಅಲ್ಲದೆ ಪೊಲೀಸರ ಮೇಲೂ ದಾಳಿ ಮಾಡಿದ್ದಾರೆ ಇದನ್ನು ಖಂಡಿಸುತ್ತೇವೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.