ಹೈವೋಲ್ಟೇಜ್ ಕ್ಷೇತ್ರ ವರುಣದಲ್ಲಿ ಕಂತೆ ಕಂತೆ ಹಣ ಪತ್ತೆ

ಮೈಸೂರು: ಮೈಸೂರಿನ ಹೈವೋಲ್ಟೇಜ್ ವರುಣ ಕ್ಷೇತ್ರದಲ್ಲಿ ಕಂತೆ, ಕಂತೆ ಹಣ ಪತ್ತೆಯಾಗಿದೆ.

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 18 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ.ಇನ್ನೂ ಈ ಹಣ ಯಾರದ್ದೆಂದು ಪತ್ತೆಯಾಗಿಲ್ಲ.

ಮೈಸೂರು ತಿ.ನರಸೀಪುರ ಹೈವೆಯಲ್ಲಿರುವ ಎಲೆಕ್ಷನ್ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಈ ಹಣ ಪತ್ತೆಯಾಗಿದೆ.

ಚುನಾವಣಾ ಆಯೋಗದವರು ಮೈಸೂರಿನ 45 ಸ್ಥಳಗಳಲ್ಲಿ ಚೆಕ್ ಪೋಸ್ಟ್ ತೆರೆದಿದ್ದು ಪ್ರತಿ ವಾಹನ ತಪಾಸಣೆ ಮಾಡುತ್ತಿದ್ದಾರೆ.ಎಲ್ಲದರ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ.