ಹುಚನ್ ಮದ್ವೇಲಿ ಉಂಡವ್ನೆ ಜಾಣಾನಾ ಐಜಿ ಸಾಹೇಬ್ರೆ?

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಸಂಚಾರ ಠಾಣೆಯವರು ದಂಡ ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ ವಿಪರ್ಯಾಸವೆಂದರೆ ಪಟ್ಟಣದ ಹೊರಗೆ ನಿಂತು ದಂಡ ಹಾಕುತ್ತಿರುವುದರ ಬಗ್ಗೆ ಹಿರಿಯ ಅಧಿಕಾರಿಗಳು ಚಕಾರ ಎತ್ತದಿರುವುದು ವಿಪರ್ಯಾಸ ಎಂದರೆ ತಪ್ಪಾಗಲಾರದು. ಹಿಂದೆ ಇದ್ದ ಡಿವೈಸ್ಪಿ ಮೋಹನ್ ಪಟ್ಟಣದ ಹೊರಗಡೆ ದಂಡ ಹಾಕುವುದು ಗೊತ್ತಾದರೆ ಅದನ್ನು ನಿಲ್ಲಿಸಿ ಸ್ವತಃ ತಾವೆ ಬೀದಿಗಿಳಿದು ಕೆಲಸ ಮಾಡುತ್ತಿದ್ದರು.
ಊರ ಹೊರಗೇಕೆ ದಂಡ: ಊರ ಹೊರಗೆ ದಂಡ ಹಾಕಲು ನಿಂತರೆ ಏನಿಲ್ಲಾಂದ್ರು ಸರ್ಕಾರದ ಬೊಕ್ಕಸದ ಜೊತೆಗೆ ಇವರವರ ಜೇಬುಗಳೂ ಭರ್ತಿಯಾಗತೊಡಗುತ್ತದೆ. ಇದಕ್ಕೆ ಪೂರಕ ಎಂಬಂತೆ ಒಂದೇ ಠಾಣೆಯ ನಾಲ್ಬರು ಅಮಾನತ್ತು ಆಗಿರುವುದು ಸಾಕ್ಷಿಯಾಗಿದೆ.
ಊರ ಹೊರಗೆ ನಿಂತು ದಂಡ ಹಾಕುತ್ತಿರುವ ಜೊತೆಗೆ ಹಣ ಜೇಬಿಗಿಳಿಸುವ ವಿಡಿಯೊ ಕೂಡ ವೈರಲ್ ಆಗಿದ್ದವು.
ಪಟ್ಟಣದೊಳಗೆ ದಂಡ ಹಾಕಲು ನಿಂತರೆ ಏನು ಮಾಡಲು ಕಷ್ಟ ಅಂತ ಸುಮ್ಮನಿದ್ದಾರೆ ಎಂದರೆ ತಪ್ಪಾಗಲಾರದು.
ಒಟ್ಟಾರೆ ಸಂಚಾರಿ ವ್ಯವಸ್ಥೆ ಕಾಪಾಡಬೇಕಾದ ಡಿವೈಸ್ಪಿ ಅವರ ಗಮನಕ್ಕೆ ಬಂದಿಲ್ವಾ.? ಬಂದಿದ್ದು ಸುಮ್ಮನಿದರಾ ಎಂಬುದೆ ಅನುಮಾನ ಮೂಡಿಸಿದೆ.