ಇಬ್ಬರು ಉಗ್ರಗ್ರಾಮಿಗಳ ಎನ್‍ಕೌಂಟರ್‍

ಶ್ರೀನಗರ: ಜಮ್ಮು -ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರಗ್ರಾಮಿಗಳು ಹತರಾಗಿದ್ದಾರೆ.

ಬುಧವಾರ ತಡರಾತ್ರಿ ಭದ್ರತಾ ಪಡೆಗಳು ಕುಲ್ಗಾಮ್ ಜಿಲ್ಲೆಯ ರೆಡ್ವಾನಿ ಪ್ರದೇಶದಲ್ಲಿ  ಶೋಧಾಕಾರ್ಯಚರಣೆ ಆರಂಭಿಸಿ ಮುತ್ತಿಗೆ ಹಾಕಿವೆ.ಆ ಸಂದರ್ಭದಲ್ಲಿ ಅಲ್ಲಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡ ಹಾರಿಸಲಾರಂಭಿಸಿದರು.

ತಕ್ಷಣ ಪ್ರತಿ ದಾಳಿ ನಡೆಸಿದ ಭದ್ರತಾ ಪಡೆಗಳು  ಇಬ್ಬರು ಉಗ್ರರನ್ನು ಬಲಿಪಡೆದಿದ್ದಾರೆ.

ಹತ್ಯೆಯಾದ ಉಗ್ರಗಾಮಿಗಳ ಗುರುತು ಮತ್ತು ಅವರು ಯಾವ ಸಂಘಟನೆಗೆ ಸೇರಿದವರು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.