ಇಂದೊಂದು ಮೋಸಗಾರ, ದಲಿತ ವಿರೋಧಿ ಸರ್ಕಾರ: ಬಿಜೆಪಿ ಆರೋಪ

ಚಾಮರಾಜನಗರ: ರಾಜ್ಯ ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿ ಯೋಜನೆಗಳ ಜಾರಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ಉದ್ಯಾನದ ಮುಂಭಾಗದಲ್ಲಿ ಧರಣಿ ಕುಳಿತ ಪ್ರತಿಭಟನಕಾರರು ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದವರಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ₹11,144 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ದಲಿತರಿಗೆ ಮೋಸ ಮಾಡಿದೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರದಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ಆಗುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹ ದೇವಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳುವ, ಪ್ರಶ್ನೆ ಮಾಡುವ ಧೈರ್ಯ ಇಲ್ಲ. ಇಂದೊಂದು ಮೋಸಗಾರ, ದಲಿತ ವಿರೋಧಿ ಸರ್ಕಾರ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ದಿವಾಳಿ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ತೆರಿಗೆ ಆದಾಯದಿಂದ ಕೊಡುತ್ತಿಲ್ಲ. ಸಾಲ ಮಾಡಿ ಕೊಡುತ್ತಿದ್ದಾರೆ. ಈ ಸಾಲದ ಹೊರೆ ಸಿದ್ದರಾಮಯ್ಯನವರ ತಲೆಮೇಲೆ ಬರುತ್ತದೆಯೇ? ಅಥವಾ ಡಿ.ಕೆ.ಶಿವಕುಮಾರ್ ತಲೆ ಮೇಲೆ ಬರುತ್ತದೆಯೇ? ಇಲ್ಲ. ರಾಜ್ಯದ ಜನರ ತಲೆಮೇಲೆ ಬರುತ್ತದೆ. 1.50 ಕೋಟಿ ಜನರಿಗೆ ಭಾಗ್ಯಗಳನ್ನು ನೀಡಲಾಗಿದೆ. ಆದರೆ ಏಳು ಕೋಟಿ ಜನರ ತಲೆ ಮೇಲೆ ₹95 ಸಾವಿರ ಸಾಲಹೊರಿಸಿದೆ. ಇದು ಸಾಲಗಾರ ಸರ್ಕಾರವಾಗಿದ್ದು, ಇನ್ನು ಎರಡು ವರ್ಷಗಳಲ್ಲಿ ಕಾಂಗ್ರೆಸ್ ರಾಜ್ಯವನ್ನು ದಿವಾಳಿ ಮಾಡುತ್ತದೆ’ ಎಂದು ಆರೋಪಿಸಿದರು.

ಸಿದ್ದರಾಮಯ್ಯನವರದ್ದು ಎಡವಟ್ಟು ಸರ್ಕಾರ. ಶಾಲೆಗಳಲ್ಲಿ ಮಾಡುತ್ತಿರುವ ಸರಸ್ವತಿ ಪೂಜೆ, ಶಾರದಾ ಪೂಜೆ ಮೇಲೆ ಸರ್ಕಾರಕ್ಕೆ ಕೆಂಗಣ್ಣು. ಇದು ಒಂದು ಕೋಮಿನ ಪೂಜೆ ಎಂಬಂತೆ ಬಿಂಬಿಸಲು ಹೊರಟಿತ್ತು. ಶಾಲೆಗಳಲ್ಲಿ ಯಾವುದೇ ಧರ್ಮದ ಆಧಾರದಲ್ಲಿ ಪೂಜೆ ಮಾಡಬಾರದು ಎಂದು ಆದೇಶ ಮಾಡಿತ್ತು. ಬಿಜೆಪಿ ಸೇರಿದಂತೆ ಎಲ್ಲ ಕಡೆಯಿಂದಲೂ ವಿರೋಧ ವ್ಯಕ್ತವಾದ ನಂತರ ಈ ಎಡವಟ್ಟಿನ ಆದೇಶವನ್ನು ವಾಪಸ್‌ ತಗೊಂಡರು. ಇದೇ ರೀತಿ ವಸತಿ ಶಾಲೆಗಳಲ್ಲಿ ಬರೆಯಲಾಗಿದ್ದ ಜ್ಞಾನ ದೇಗುವಲವಿದು, ಕೈಮುಗಿದ ಒಳಗೆ ಬಾ ಎಂಬ ಸಂದೇಶವನ್ನು ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಿಸಿ ಎಡವಟ್ಟು ಮಾಡಿಕೊಂಡಿತ್ತು. ವಿರೋಧ ನಂತರ ಅದನ್ನೂ ವಾಪಸ್‌ ಮಾಡಿತ್ತು’ ಎಂದು ವ್ಯಂಗ್ಯವಾಡಿದರು.