ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಡಿ.ಎ.ಆರ್.ಆವರಣದಲ್ಲಿ ಬುಧವಾರ ಕೋವಿಡ್-19 ಜಾಗೃತಿಗಾಗಿ ಹಮ್ಮಿಕೊಂಡಿರುವ ಬೈಕ್ ರ್ಯಾಲಿಗೆ ದಕ್ಷಿಣ ವಲಯ ಪೆÇಲೀಸ್ ಮಹಾನಿರ್ದೆಶಕ ವಿಫುಲ್ ಕುಮಾರ್ ಅವರು ಚಾಲನೆ ನೀಡಿದರು.
ಕೋವಿಡ್-19 ಹೋಗಲಾಡಿಸಲು ಪ್ರತಿಯೋಬ್ಬರ ಪಾತ್ರ ಅಪಾರ ಹಾಗೂ ಜಾಗೃತಿ ಮುಖ್ಯ. ಈ ನಿಟ್ಟಿನಲ್ಲಿ ಸಾಮಾಜಿಕ ಅಂತ ಕಾಪಾಡೋದರ ಜೊತೆಗೆ ಮಾಸ್ಕ್ ಧರಿಸಿ ಕೈಗಳನ್ನ ಸ್ಯಾನಿಟರೈಸ್ಡ್ ಮಾಡಿಕೊಂಡು ರೋಗಾಣುವಿನ ಜೊತೆ ಹೋರಾಡಬೇಕು ಎಂದು ಸಲಹೆ ನೀಡಿದರು.
ಕೋವಿಡ್-19 ಜೊತೆಗೆ ಮಾದಕಜಾಲದ ಬಗ್ಗೆಯೂ ಇದೆ ಸಂದರ್ಭದಲ್ಲಿ ಅರಿವು ಮೂಡಿಸಿದರು.
ಚಾಮರಾಜನಗರ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿ ಜಿಲ್ಲಾ ಆಸ್ಪತ್ರೆ ಕೋವಿಡ್ ಕೇಂದ್ರದ ಮುಂಭಾಗ ವೈದ್ಯರು, ದಾದಿಯರಿಗೆ, ಪೌರ ಕಾರ್ಮಿಕರಿಗೆ ಪುಷ್ಪ ವೃಷ್ಟಿಗೆರೆಯಲಾಯಿತು.
ಚಾಮರಾಜನಗರ ಜಿಲ್ಲಾ ಪೆÇಲೀಸ್ ಅಧೀಕ್ಷಕಿ ದಿವ್ಯ, ಹೆಚ್ಚುವರಿ ಪೆÇಲೀಸ್ ಅಧೀಕ್ಷಕಿ ಅನಿತಾ ಹದ್ದಣ್ಣನ್ನವರ್, ಚಾಮರಾಜನಗರ ಉಪವಿಭಾಗದ ಉಪಾಧೀಕ್ಷಕರಾದ ಪ್ರಿಯದರ್ಶಿನಿ ಶ್ಯಾಣಿಕೊಪ್ಪ ಹಾಗೂ ಇನ್ನಿತರ ಪೆÇಲೀಸ್ ಅಧಿಕಾರಿಗಳು, ಸಂಚಾರಿ ಠಾಣೆಯ ಸಿಬ್ಬಂದಿಗಳು ಇದ್ದರು.