ಐವರ ಕೊಲೆ ಪ್ರಕರಣ ಭೇದಿಸಿದ ಖಾಕಿ: ಪ್ರಿಯಕರನಿಗಾಗಿ ಇಡೀ ಕುಟುಂಬಕ್ಕೆ ಕೊಳ್ಳಿ ಇಟ್ಟ ಪಾತಕಿ

ಕೆಆರ್ ಎಸ್ : ಮಕ್ಕಳು ಸೇರಿದಂತೆ ಐವರನ್ನು ಭೀಕರವಾಗಿ ಹತ್ಯೆ ಮಾಡಿದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ  ಕೆ ಆರ್ ಎಸ್ ಪೊಲಿಸರು ಯಶಸ್ವಿಯಾಗಿದ್ದಾರೆ.

ಕಳೆದ ನಾಲ್ಕು ದಿನದ ಹಿಂದೆ ಕೆ ಆರ್ ಎಸ್ ನ ಬಜಾರ್ ಲೈನ್ ನಲ್ಲಿ ವಾಸವಾಗಿದ್ದ ಲಕ್ಷ್ಮಿ (30) ), ಮಕ್ಕಳಾದ ರಾಜ್ (12) ಕೋಸಮಲ್ (7), ಕುನಾಲ್(5) ಹಾಗೂ ಅಣ್ಣನ ಮಗ ಗೋವಿಂದ್(12) ಎಂಬುವರ ಕೊಲೆಯಾಗಿತ್ತು.

ಕೊಲೆಯಾದ ಲಕ್ಷ್ಮಿಯ ಪತಿ ಗಂಗಾರಾಮ್ ಗೆ  ಬೇರೆ ಹೆಂಗಸು ಲಕ್ಷ್ಮಿ ಎಂಬಾಕೆ ಜೊತೆ ಅಕ್ರಮ ಸಂಬಂಧವಿತ್ತು.

ಗಂಗಾರಾಮ್ ಪತ್ನಿ ಹಾಗೂ ಮಕ್ಕಳನ್ನು ಕೊಲೆ ಮಾಡಿಬಿಟ್ಟರೆ, ಪ್ರಿಯಕರನ ಜೊತೆ ಸುಖವಾಗಿರಬಹುದುದೆಂದು ಅವನ ಇಡೀ ಕುಟುಂಬವನ್ನು ಕೊಲೆ ಮಾಡಲು ಪ್ರಿಯತಮೆ ಸ್ಕೆಚ್ ಹಾಕಿದ್ದಳು.

ಶನಿವಾರ ಗಂಗಾರಾಮ್ ಮನೆಯಲ್ಲೆ ಇದ್ದ ಪ್ರಿಯತಮೆ ಲಕ್ಷ್ಮಿ ಮುಂಜಾನೆ ವೇಳೆಗೆ ಐವರನ್ನ  ಭೀಕರವಾಗಿ ಕೊಲೆ ಮಾಡಿದಳು.

ಪೋಲಿಸರಿಗೆ ಲಕ್ಷ್ಮಿ ಬಗ್ಗೆ ಅನುಮಾನ ಬಂದು ಅವಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ  ತಾನು ಮಾಡಿದ ಕೊಲೆಯನ್ನು ಖಾಕಿ ಮುಂದೆ ಒಪ್ಪಿಕೊಂಡಿದ್ದಾಳೆ.

ಮಾಡಿದ ತಪ್ಪಿಗೆ ಲಕ್ಷ್ಮಿ ಜೈಲು ಪಾಲಾದರೆ, ಲಕ್ಷ್ಮಿ ಸಹವಾಸ ಮಾಡಿ ಗಂಗಾರಾಮ್ ಈಗ ಹೆಂಡತಿ, ಮಕ್ಕಳನ್ನು ಕಳೆದುಕೊಂಡು ಅನಾಥನಾಗಿದ್ದಾನೆ.