ಕ್ಷುಲ್ಲಕ ಜಗಳ: ವ್ಯಕ್ತಿಗೆ ಚಾಕುವಿನಿಂದ ಇರಿದ ಯುವಕರ ಗುಂಪು

ಚಾಮರಾಜನಗರ: ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ಯುವಕರ ಗುಂಪೊಂದು ವ್ಯಕ್ತಿಗೆ ಚಾಕು ಇರಿದಿರುವ ಘಟನೆ ಚಾಮರಾಜನಗರ ಪಟ್ಟಣದಲ್ಲಿ ನಡೆದಿದೆ.

ಬೆಂಗಳೂರಿನ ಖಾಸಗಿ ಕಂಪ್ಯೂಟರ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿರುವ ನಗರದ ನಿವಾಸಿ ಸಂಜಯ್ ಕುಮಾರ್ ಎಂಬಾತನಿಗೆ ಯುವಕ ಗುಂಪೊಂದು ಚಾಕು ಇರಿದಿದೆ.

ಖಾಸಗಿ ಹೋಟೆಲ್ ಅಲ್ಲಿ ಸಂಜಯ್ ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದಾಗ ಪಕ್ಕದ ಟೇಬಲ್ಲಿನಲ್ಲಿದ್ದ ಯುವಕರ ಗುಂಪು ಅನಗತ್ಯ ವಿಚಾರಕ್ಕೆ ಕ್ಯಾತೆ ತೆಗೆದು ಅವ್ಯಾಚ್ಯ ಪದ ಬಳಸಿ ಗಲಾಟೆ ಮಾಡಿದ್ದಾರೆ.

ರಾತ್ರಿ ವಾಕಿಂಗ್ ಗೆ ತೆರಳಿದ ಸಂದರ್ಭದಲ್ಲಿ ಕ್ಯಾತೆ ಮಾಡಿದ್ದ ಯುವಕರ ಗುಂಪು ಗಲಾಟೆ ಮಾಡಿ ಚಾಕುವಿನಿಂದ ಇರಿದಿದ್ದಾರೆ.

ಚಾಕು ಇರಿತದಿಂದ ಗಾಯಗೊಂಡ ವ್ಯಕ್ತಿಯನ್ಯ ಜಿಲ್ಲಾಸ್ಪತ್ರೆಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಾಕು ಇರಿದವನು ನಗರದ ನಿವಾಸಿ ಅರುಣ್ ಹಾಗೂ ಇವರ ಜೊತೆಯಲ್ಲಿದ್ದ ಇಬ್ಬರು ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ದೂರು ದಾಖಲಾಗಿದೆ.

ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪೊಕ್ಸೊ ಪ್ರಕರಣ ಹಾಗೂ ಇಂತಹ ಗ್ಯಾಂಗ್ ವಾರ್ ಗಳಂತ ಪ್ರಕರಣ ನಡೆದರೂ ಆರೋಪಿಗಳನ್ನ ಬಂದಿಸುವಲ್ಲಿ ಪಟ್ಟಣ ಠಾಣಾ ಪೊಲೀಸರು ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಾರದು.

ಪಟ್ಟಣದಲ್ಲಿ ಇದೆ ತರಹ ಹುಡುಗಿಯ ವಿಚಾರಗಳಿಗೆ ಗಲಾಟೆ ಮಾಡಿಕೊಂಡು ಕ್ಯಾತೆ ತೆಗೆದು ಚಾಕು ಇರಿದ ಪ್ರಕರಣ ಇದು ಎರಡನೆಯದು.