ಬೆಂಗಳೂರು: ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ ಎಂದು ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಜಮೀರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಡ್ರಗ್ ವಿಚಾರದಲ್ಲಿ ನನ್ನ ಹೆಸರು ತಳುಕು ಹಾಕಿ, ನನ್ನನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಯಾವ ತಪ್ಪು ಮಾಡಿಲ್ಲ ಎಂದು ಜಮೀರ್ ಹೇಳಿದರು.
ನನಗೂ ಫಾಸಿಲ್ ಗೂ ಸಂಪರ್ಕವಿಲ್ಲ. ಕಳ್ಳನೊಬ್ಬ ನನ್ನೊಡನೆ ಫೆÇೀಟೋ ತೆಗೆಸಿಕೊಂಡ ಮಾತ್ರಕ್ಕೆ ನಾನು ಕಳ್ಳನಾಗುತ್ತೇನೆಯೇ ಎಂದು ಜಮೀರ್ ಪ್ರಶ್ನಿಸಿದರು.
ಈ ಎಲ್ಲದರ ಹಿಂದೆ ರಾಜಕೀಯ ಕೈವಾಡ ಇದೆ. ನಾನು ಬೆಳೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನನ್ನು ಮುಗಿಸಬೇಕು ಎಂದು ತೀರ್ಮಾನ ಮಾಡಿದ್ದಾರೆಂದರು.
ನಾನು ವರ್ಷಕ್ಕೊಮ್ಮೆ ಉಮ್ರಾಗೆ ಹೋಗುತ್ತೇನೆ. ಫಾಸಿಲ್ ಅಲ್ಲಿಗೆ ಬಂದಿರಬಹುದು. ಒಂದು ವೇಳೆ ಡ್ರಗ್ಸ್ ದಂಧೆಯಲ್ಲಿ ಫಾಸಿಲ್ ಕೈವಾಡವಿದ್ದರೆ ಅವನಿಗೆ ಗಲ್ಲುಶಿಕ್ಷೆಯಾಗಲಿ ಎಂದು ಜಮೀರ್ ಹೇಳಿದರು.
ನಾನು ಶಾಂತಿ-ನೆಮ್ಮದಿಗಾಗಿ ಕೊಲಂಬೋಗೆ ಹೋಗ್ತೀನಿ. ಕೊಲಂಬೋಗೆ ಹೋದರೆ ಕ್ಯಾಸಿನೋಗೆ ಹೋದಂತೆ ಅರ್ಥನಾ ಎಂದು ಶಾಸಕ ಜಮೀರ್ ಪ್ರಶ್ನಿಸಿದ್ದಾರೆ.
ಸಂಬರಗಿ ತಮ್ಮ ವಿರುದ್ಧ ಎಲ್ಲಿಯೂ ಡ್ರಗ್ಸ್ ಆರೋಪ ಮಾಡಿಲ್ಲ. ಅವರು ಅವರ ಕೆಲಸ ಮಾಡಲಿ ಎಂದು ಅವರು ತಿಳಿಸಿದರು.