ಸಂಜನಾ ಜೊತೆ ಜಮೀರ್ ನಂಟು ಕುರಿತು ವಿಚಾರಣೆ ನಡೆದಿದೆ -ಬಿ.ವೈ.ವಿ.

ಚಾಮರಾಜನರ: ಡ್ರಗ್ಸ್ ದಂಧೆಯಲ್ಲಿ ಸೆರೆಯಾಗಿರುವ ಸಂಜನಾ ಜೊತೆ ಜಮೀರ್ ಅಹಮದ್ ನಂಟು ವಿಚಾರ ಕುರಿತು ವಿಚಾರಣೆ ನಡೆದಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜೆಯೇಂದ್ರ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಂತರ ಮೊದಲ ಬಾರಿಗೆ ಚಾಮರಾಜನಗರಕ್ಕೆ ಭೇಟಿ ನೀಡಿದ ವಿಜೆಯೇಂದ್ರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದರು.
ಸಂಜನಾ ಜೊತೆ ಜಮೀರ್ ಅಹಮದ್ ನಂಟು ವಿಚಾರ ಕುರಿತು ನಾನು ಈಗಲೇ ಏನೂ ಮಾತನಾಡಲ್ಲ ಎಂದರು.
ಡ್ರಗ್ ವಿಚಾರದಲ್ಲಿ ಯಾರನ್ನೂ ಕೂಡ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ವಿಜೆಯೇಂದ್ರ ತಿಳಿಸಿದರು.
ಚಿತ್ರರಂಗ ಸೇರಿದಂತೆ ಇನ್ಯಾವುದೇ ರಂಗದಲ್ಲಿದ್ದರೂ ಕೂಡ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಹತ್ತಾರು ವರ್ಷಗಳಿಂದ ಡ್ರಗ್ ದಂಧೆ ನಡೆಯುತ್ತಿದ್ದರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದೀಗ ಬಿಜೆಪಿ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದರು.
ಡ್ರಗ್ ಮಾಫಿಯಾವನ್ನು ರಾಜ್ಯದಿಂದ ಕಿತ್ತು ಹಾಕಿ ತಾರ್ಕಿಕ ಅಂತ್ಯ ಕಾಣಬೇಕಾಗಿದೆ ಎಂದವರು ಹೇಳಿದರು.
ಡ್ರಗ್ ಮಾಫಿಯಾದಿಂದ ಯುವಕರು ದಾರಿ ತಪ್ಪುತ್ತಿದ್ದಾರೆಂದು ವಿಜೆಯೇಂದ್ರ ಬೇಸರ ವ್ಯಕ್ತಪಡಿಸಿದರು.