ಸುತ್ತೂರು: ಜಾತಿ ವ್ಯವಸ್ಥೆ ತೊಲಗಿದರೆ ಸಮಾನತೆಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಂಗಳವಾರ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಸವಾದಿ ಶರಣರು ಶ್ರೇಣಿಕೃತ ಸಮಾಜಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ್ದೇ ಅನುಭವ ಮಂಟಪದ ಮೂಲಕ. ಬೇರೆ ಬೇರೆ ಜಾತಿಯವರು ಎಲ್ಲರೂ ಒಂದೇ ಸಮಾನವಾಗಿ ಕುಳಿತುಕೊಳ್ಳಬೇಕು ಎಂದು ಅವರು ತಿಳಿಸಿದರು
ಆಧುನಿಕ ಅನುಭವ ಮಂಟಪ ಮಾಡಬೇಕು ಅಂತ ಗೋರುಚ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದೆ. ಈಗಿನ ಸರ್ಕಾರ ಅದರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದೆ ಎಂದುಕೊಂಡಿದ್ದೇನೆ ಎಂದರು ಸಿದ್ದರಾಮಯ್ಯ.
ಸರಳ ವಿವಾಹಗಳು ಇಂದಿನ ನಮ್ಮ ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ ಅತ್ಯಂತ ಅಗತ್ಯ. ಸರಳ ವಿವಾಹದ ಜೊತೆ ಅಂತರ್ಜಾತಿ ವಿವಾಹಗಳಾದರೆ ಇನ್ನೂ ಸ್ವಾಗತಾರ್ಹ ಎಂದು ಅವರು ತಿಳಿಸಿದರು.
ಬಸವಣ್ಣನವರ ಕಾಲದಲ್ಲಿಯೇ ಅಂತರ್ಜಾತಿ ವಿವಾಹ ನಡೆದಿತ್ತು ಎಂದವರು ಹೇಳಿದರು.
ಅಂತರ್ ಧರ್ಮೀಯ ಮದುವೆಗಳು ಆಗಬೇಕು, ಅದಕ್ಕೆ ಅಡ್ಡಿಯಾಕೆ ಮನುಷ್ಯರಾಗಿ ಬದುಕಿ ಬಾಳಬೇಕು ಎಂದರು.
ಎಲ್ಲರೂ ದುಡಿಯಬೇಕು ಎಲ್ಲರೂ ತಿನ್ನಬೇಕು. ಉತ್ಪಾದನೆಯನ್ನು ಎಲ್ಲರೂ ಹಂಚಿಕೊಳ್ಳಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ವೃತ್ತಿಯಿಂದ ಯಾರೂ ಮೇಲಲ್ಲ, ಕೀಳಲ್ಲ, ಇನ್ನೂ ಅನೇಕ ಕಡೆ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಇದು ನೋವಿನ ಸಂಗತಿ ಎಂದು ಅವರು ವಿμÁದಿಸಿದರು.
ಶೂದ್ರ, ಅಸ್ಪೃಶ್ಯ ವರ್ಗ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಅವರೆಲ್ಲರಿಗೂ ಶಿಕ್ಷಣ ಸಿಗಬೇಕೆಂದು ರಾಜೇಂದ್ರ ಸ್ವಾಮಿಗಳು ಹಳ್ಳಿಗರಿಗಾಗಿ ವಸತಿ ಸೌಲಭ್ಯ ಕಲ್ಪಿಸಿ ಶಿಕ್ಷಣ ನೀಡಿದರು ಎಂದರು.
ನಾನು ಚಿಕ್ಕವನಿದ್ದಾಗ ವೀರಮಕ್ಕಳ ಕುಣಿತವನ್ನು ರಾಜೇಂದ್ರ ಶ್ರೀಗಳ ಎದುರು ಮಾಡಿದ್ದೆ. ನನಗೆ ಶ್ರೀಗಳು 5ರೂ.ಕೊಟ್ಟಿದ್ದರು. ಅದರಿಂದ ಕುರಿಮರಿ ಸಾಕಿದ್ದೆ ಎಂದು ಹಳೆಯ ದಿನಗಳನ್ನು ಸ್ಮರಿಸಿದರು.
ಇದು ನನ್ನ ಎರಡು ಬಾರಿ ಆಯ್ಕೆ ಮಾಡಿರುವ ಕ್ಷೇತ್ರ. ಇಲ್ಲಿ ಗೆದ್ದೇ ನಾನು ಸಿಎಂ ಆಗಿರುವುದು ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರೀ ದೇಶೀಕೇಂದ್ರ ಸ್ವಾಮೀಜಿ, ವಿಜಯಪುರದ ಶ್ರೀ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಮಹಾಸ್ವಾಮಿ ಸೇರಿದಂತೆ ವಿವಿಧ ಮಠಾಧೀಶರುಗಳು, ಸಚಿವ ಎಸ್.ಟಿ.ಸೋಮಶೇಖರ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಡಾ. ಪುಷ್ಪಾ ಅಮರನಾಥ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಭಾಗವಹಿಸಿದ್ದರು.