ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜೀವಾವಧಿ ಶಿಕ್ಷೆ ಹಾಗೂ 9 ಪ್ರಕರಣಗಳಿಗೆ ಬೇಕಾಗಿದ್ದ ಆರೋಪಿಯೊಬ್ಬ ಮೂರು ವರ್ಷದಿಂದ ನಾಪತ್ತೆಯಾಗಿದ್ದು, ಆತನ ಬಲೆಗೆ ಒಂದು ತಿಂಗಳ ಹಿಂದೆಯಷ್ಟೆ ರಚಿಸಿದ ತಂಡಕ್ಕೆ ಆರೋಪಿ ಬಳ್ಳಾರಿಯಲ್ಲಿ ಸಿಕ್ಕಿ ಬಿದ್ದಿದ್ದಾನೆ.
ಬಳ್ಳಾರಿಯಲ್ಲಿ ಆರೋಪಿಯನ್ನು ಚಾಮರಾಜನಗರ ಜಿಲ್ಲಾ ಪೆÇಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ದಿವ್ಯ ಅವರು ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಘಟನೆ ವಿವರ: 2018 ಮೇ 21ರಂದು ಮೈಸೂರು ಕಾರಾಗೃಹದಿಂದ ಚಾಮರಾಜನಗರ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದಿದ್ದ ಚಾಮರಾಜನಗರದ ಗಾಳೀಪುರ ಬಡಾವಣೆ ನಿವಾಸಿ ರಫಿಕ್@ಚುಮ್ಟಿ ಮೂರು ವರ್ಷದಿಂದ ತಲೆ ಮರೆಸಿಕೊಂಡಿದ್ದನು.
ಈತ 2013ರಲ್ಲೂ ಗುಂಡ್ಲುಪೇಟೆ ನ್ಯಾಯಾಲಯದಿಂದ ಮೈಸೂರಿಗೆ ಕರೆದುಕೊಂಡು ಹೋಗುವಾಗ ನಂಜನಗೂಡು ಹುಲ್ಲಹಳ್ಳಿ ವೃತ್ತದಿಂದ ತಪ್ಪಿಸಿಕೊಂಡು ಹೋಗಿದ್ದ. ಈತನ ವಿರುದ್ದ ಮೈಸೂರು, ಚಾಮರಾಜನಗರ ಸೇರಿದಂತೆ 9 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.
ಈತನನ್ನ ಬಂದಿಸಲು ಎಎಸ್ಪಿ ಸುಂದರರಾಜು, ಡಿವೈಸ್ಪಿ ಪ್ರಿಯದರ್ಶಿನಿ ನೇತೃತ್ವದ ಮಾರ್ಗದರ್ಶನದಲ್ಲಿ ಪಟ್ಟಣ ಠಾಣೆ ಇನ್ಸ್ ಪೆಕ್ಟರ್ ಮಹೇಶ್, ಪೂರ್ವ ಪೆÇಲೀಸ್ ಠಾಣೆ ಆನಂದ್, ಸಂತೆಮರಳ್ಳಿ ಠಾಣೆಯ ತಾಜುದ್ದೀನ್, ಸಿಬ್ಬಂದಿಗಳಾದ ಸಯ್ಯದ್ ಅಸಾದುಲ್ಲಾ, ಮೋಹನ್ ಕುಮಾರ, ಸುರೇಶ್, ಜಡೇಸ್ವಾಮಿ, ಪ್ರಸಾದ್, ಡಿಎಸ್ ಬಿ ವಿಭಾಗದ ಮಹದೇವ ಶೆಟ್ಟಿ, ವೆಂಕಟೇಶ್, ಶಂಕರರಾಜು, ಶಿವಕುಮಾರ್ ಸೇರಿದಂತೆ ಇತರರು ಪತ್ತೆಕಾರ್ಯದಲ್ಲಿ ಭಾಗವಹಿಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.