ಕನ್ನಡ ಭಾಷೆ ಬಳಸಿ ಬೆಳಸುವಲ್ಲಿ ಆಟೋ ಚಾಲಕರ ಪಾತ್ರ ಮಹತ್ವದ್ದು – ಹೆಚ್.ಸಿ ಕೃಷ್ಣ

ಬೆಂಗಳೂರು: 66ನೇ ಕನ್ನಡ ರಾಜ್ಯೋತ್ಸವ ಮತ್ತು ಶಂಕರ್ ನಾಗ್ ರವರ ಹುಟ್ಟುಹಬ್ಬವನ್ನು ಜೆಪಿನಗರ 7ನೇ ಹಂತದ ಕೊತನೂರು ಮುಖ್ಯ ರಸ್ತೆಯಲ್ಲಿರುವ ಬ್ರಿಗೇಡ್ ಅಪಾರ್ಟ್ಮೆಂಟ್ ಬಳಿ ಡಾ. ಸರ್. ಎಂ ವಿಶ್ವೇಶ್ವರಯ್ಯ ಆಟೋ ನಿಲ್ದಾಣ ಮತ್ತು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಚರಿಸಲಾಯಿತು.

ದಿ ನ್ಯಾಷನಲ್ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಹೆಚ್.ಸಿ ಕೃಷ್ಣರವರು ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ಕರ್ನಾಟದಲ್ಲಿ ಸ್ವಾಭಿಮಾನಿ ಕನ್ನಡಿಗನೇ ಸಾರ್ವಭೌಮ, ಬೆಂಗಳೂರಿನಲ್ಲಿ ಕನ್ನಡ ಭಾಷೆಯನ್ನ ಹೆಚ್ಚಾಗಿ ಬಳಸಿ ಬೆಳಸುವಲ್ಲಿ ಆಟೋ ಚಾಲಕರ ಪಾತ್ರ ಮಹತ್ವವಾದುದು ಎಂದು ತಿಳಿಸಿದರು.

ಕನ್ನಡ ಭಾಷೆ ನೆಲ ಜಲ ವಿಚಾರವಾಗಿ ಧಕ್ಕೆ ಬಂದಾಗ ರಸ್ತೆಗೆ ಇಳಿದು ಕರ್ನಾಟಕದ ಪರವಾಗಿ ಮೊದಲು ಪ್ರತಿಭಟಿಸುವುದೇ ಆಟೋ ಚಾಲಕರು, ಕರಾಟೆ ಕಿಂಗ್ ಶಂಕರ್ ನಾಗ್ ಅವರ ಹುಟ್ಟುಹಬ್ಬವನ್ನ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ “ಆಟೋ ಚಾಲಕರ ದಿನಾಚರಣೆ” ಎಂದು ಅಧಿಕೃತವಾಗಿ ಆಚರಿಸಲು ಮುಂದಾಗಬೇಕು. ಆರ್ಥಿಕವಾಗಿ ಹಿಂದುಳಿದ ಆಟೋ ಚಾಲಕರ ಕ್ಷೇಮಾಭಿವೃದ್ಧಿಗಾಗಿ ವಿಮೆ ಮತ್ತು ಸಾಲ ಸೌಲಭ್ಯಗಳನ್ನ ಸರ್ಕಾರಿ ಯೋಜನೆಗಳನ್ನಾಗಿ ಜಾರಿಗೆ ತಂದು ಕಟ್ಟಕಡೆಯ ಸ್ವಾಭಿಮಾನಿ ಆಟೋ ಚಾಲಕನಿಗೆ ತಲುಪವಂತಾಗಬೇಕು ಎಂದು ಅವರು ಹೇಳಿದರು.

ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಡಾ. ಕೋದಂಡರಾಮ್, ಭರತ್, ಮೂರ್ತಿ, ಜೆಡಿಎಸ್ ಮುಖಂಡ ಬಾಲಚಂದ್ರ, ಅನಿಲ್, ಅಜಯ್ ಶಾಸ್ತ್ರಿ, ಏಳನೀರು ಚಂದ್ರು, ಜಿಮ್ ಮಂಜು, ವೆಂಕಟೇಶ್, ಯೋಗರಾಜ್, ಚಕ್ರವರ್ತಿ, ಸರ್. ಎಂವಿ ಆಟೋ ಚಾಲಕರ ಸಂಘದ ಕೃಷ್ಣಪ್ಪ, ಪುಟ್ಟಯ್ಯ, ರಾಜು, ವೆಂಕಟೇಶ್, ಶಿವು ಇನ್ನಿತರರು ಇದ್ದರು.