ಮುಂಬೈ: ಬಾಲಿವುಡ್ನ ವಿವಾದಿತ ನಟಿ ಕಂಗನಾ ರಣಾವತ್ ನಟನೆಯ ಎಮರ್ಜೆನ್ಸಿ ಚಿತ್ರ ಈಗ ವಿವಾದಕ್ಕೀಡಾಗಿದೆ.
ಚಿತ್ರದ ಫಸ್ಟ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಎಬ್ಬಿಸಿತ್ತು.
ಇಂದಿರಾ ಗಾಂಧಿ ಅವರ ಲುಕ್ನಲ್ಲಿ ಕಂಗನಾ ಮಿಂಚಿದ್ದರು.ಇದರ ಬೆನ್ನಲ್ಲೇ ಈ ಸಿನಿಮಾ ರಿಲೀಸ್ಗೂ ಮುನ್ನವೇ ವಿವಾದಕ್ಕೆ ಸಿಲುಕಿದೆ.
ಕಂಗನಾ ರಣಾವತ್ ನಿರ್ದೇಶನದ ಎಮರ್ಜೆನ್ಸಿ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
ಚಿತ್ರದ ಫಸ್ಟ್ ಲುಕ್ ವೈರಲ್ ಆದ ಬೆನ್ನಲ್ಲೇ ಈ ಚಿತ್ರದ ಕುರಿತು ಕಾಂಗ್ರೆಸ್ ಉಪಾಧ್ಯಕ್ಷೆ ಸಂಗೀತಾ ಶರ್ಮಾ ಬಿಜೆಪಿ ಏಜೆಂಟ್ ಎಂದು ಟಾಂಗ್ ಕೊಟ್ಟಿದ್ದರು.
ಇಂದಿರಾ ಗಾಂಧಿ ಅವರ ಇಮೇಜ್ಗೆ ಧಕ್ಕೆ ತರಲು ಕಂಗನಾ ಈ ಪಾತ್ರ ಮಾಡಿದ್ದಾರೆ ಎಂದು ಕಂಗನಾ ಕಡೆ ಚಾಟಿ ಬೀಸಿದ್ದರೆ.
ರಿಲೀಸ್ಗೂ ಮುನ್ನವೇ ಈ ಸಿನಿಮಾ ತಾವು ನೋಡಬೇಕು ಎಂದು ಸಂಗೀತಾ ಬೇಡಿಕೆ ಕೂಡ ಇಟ್ಟಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಾಜ್ಪಾಲ್ ಸಿಂಗ್, ಎಮರ್ಜೆನ್ಸಿ ಸಿನಿಮಾ ಈ ದೇಶದ ಪ್ರಜಾಪ್ರಭುತ್ವದ ಮೇಲಿನ ಚಿತ್ರವಾಗಿದೆ.
ಇಂದಿರಾ ಗಾಂಧಿ ಆ ಸಮಯದಲ್ಲಿ ನಾಯಕಿಯಾಗಿದ್ದರು. ಹಾಗಾಗಿ ಚಿಂತಿಸಬೇಕಿಲ್ಲ ಎಂದು ಕಂಗನಾ ಪರ ರಾಜ್ಪಾಲ್ ಸಿಂಗ್ ಬ್ಯಾಟಿಂಗ್ ಮಾಡಿದ್ದಾರೆ.
ಈ ವಿವಾದದ ಕುರಿತು ಸಾಮಾಜಿಕ ಜಾಲತಾಣಲ್ಲಿ ಚರ್ಚೆಗೆ ಎಡೆ ಮಾಡಿದೆ.